ಉಚಿತ ಪಠ್ಯ ಪುಸ್ತಕಗಳಿಗಾಗಿ ಅರ್ಜಿ ಆಹ್ವಾನ

7

ಉಚಿತ ಪಠ್ಯ ಪುಸ್ತಕಗಳಿಗಾಗಿ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ 2019–20 ನೇ ಸಾಲಿಗೆ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಪಠ್ಯ ಪುಸ್ತಕಗಳ ಮುದ್ರಣ ಮಾಡುತ್ತಿದ್ದು, ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಪಠ್ಯ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲು ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎನ್‌.ಗೋಪಾಲಕೃಷ್ಣ ಮನವಿ ಮಾಡಿದ್ದಾರೆ.

 ಎಲ್ಲ ಏಳು ಮಾಧ್ಯಮಗಳಲ್ಲಿ ಒಟ್ಟು 499 ಶೀರ್ಷಿಕೆಗಳ ಪಠ್ಯಪುಸ್ತಕಗಳನ್ನು ವಿತರಿಸಲಾಗುವುದು. ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಗಳ ಅವಶ್ಯಕತೆಗೆ ಅನುಗುಣವಾಗಿ ಪಠ್ಯಪುಸ್ತಕಗಳಿಗೆ ಬೇಡಿಕೆಯನ್ನು ವೆಬ್ ಆಧಾರಿತ ಅರ್ಜಿಯ ಮೂಲಕವೇ ಸಲ್ಲಿಸಬೇಕು. ಇದನ್ನು ಅಪ್ಲಿಕೇಷನ್‌(ಸ್ಕ್ರೀನ್‌) ಆನ್‌ಲೈನ್‌ನಲ್ಲಿ ಇದೇ 15 ರೊಳಗೆ ದಾಖಲಿಸಬೇಕು ಎಂದು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !