ಬುಧವಾರ, ಫೆಬ್ರವರಿ 19, 2020
28 °C

ದೇಶಕ್ಕೆ ಮೂರುನಾಮ: ಕೇಂದ್ರದ ವಿರುದ್ಧ ಸಾಹಿತಿ ಅರವಿಂದ ಮಾಲಗತ್ತಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೇಂದ್ರ ಸರ್ಕಾರವು ದೇಶಕ್ಕೆ ‘ಸಿಎಎ’, ‘ಎನ್‌ಆರ್‌ಸಿ’ ಹಾಗೂ ‘ಎನ್‌ಪಿಆರ್’ ರೂಪದಲ್ಲಿ ಮೂರುನಾಮಗಳನ್ನು ಹಾಕಿದೆ ಎಂದು ಸಾಹಿತಿ ಅರವಿಂದ ಮಾಲಗತ್ತಿ ಹರಿಹಾಯ್ದರು.

ಬಹುಜನ ವಿದ್ಯಾರ್ಥಿ ಸಂಘವು (ಬಿವಿಎಸ್‌) ಭಾನುವಾರ ಇಲ್ಲಿ ಏರ್ಪಡಿಸಿದ್ದ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಾಥೂರಾಂ ಗೋಡ್ಸೆ ಚಿಂತನೆ ಅಳವಡಿಸಿಕೊಂಡಿರುವ ಕೇಂದ್ರ ಸರ್ಕಾರವು ಸಂವಿಧಾನದೊಳಗೆ ಮರಿಮನುಸ್ಮೃತಿಯನ್ನು ಅಳವಡಿಸಲು ಹುನ್ನಾರ ನಡೆಸಿದೆ. ನಾವೆಲ್ಲರೂ ಸೈನಿಕರಂತೆ ಸಂವಿಧಾನವನ್ನು ರಕ್ಷಿಸಬೇಕಿದೆ’ ಎಂದು ಹೇಳಿದರು.

‌ಚಿಂತಕ ಸಿ.ಎಸ್.ದ್ವಾರಕನಾಥ್ ಮಾತನಾಡಿ, ‘ಕೆಲವು ಚಿತ್ಪಾಲ ಬ್ರಾಹ್ಮಣರು ಮಹಾತ್ಮ ಗಾಂಧಿಯನ್ನು ಕೊಲ್ಲುವಂತಹ ತಂತ್ರ ಹೆಣೆದ ನಾಗಪುರದ ಕ್ಯಾಂಪಿನಿಂದಲೇ ಈ ‘ಸಿಎಎ’ ಸೂತ್ರ ರಚಿಸಲಾಗಿದೆ. ‘ಇವನಾರವ, ಇವನಾರವ’ ಎಂದು ಕೇಳುವ ಮೂಲಕ ಇದು ಸಂವಿಧಾನದ ಆಶಯಗಳಿಗೆ ಮಾತ್ರವಲ್ಲ, ಬಸವಣ್ಣನವರ ತತ್ವಗಳಿಗೂ ವಿರುದ್ಧವಾದುದು’ ಎಂದರು.

‘ಸಂಸದರಿಗಾಗಿ ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ಇವರಿಗೆಂದೇ ₹1 ಕೋಟಿ ಮೌಲ್ಯದ ಬಹುಮಾನ ನೀಡಲು ಭಿಕ್ಷೆ ಎತ್ತಿಯಾದರೂ ತರುತ್ತೇನೆ’ ಎಂದು ಲೇವಡಿ ಮಾಡಿದರು.‌

ಶಾಸಕ ಮಹೇಶ್ ಮಾತನಾಡಿ, ಕಾಂಗ್ರೆಸ್‌ ಹಾಗೂ ಕಮ್ಯುನಿಸ್ಟರು ಸಾಮಾನ್ಯರಲ್ಲ. ಇವರು ಹಾಗೂ ಬಿಜೆಪಿ ದೇಶದಲ್ಲಿ ‘ಸಿವಿಲ್ ವಾರ್’
ಯೋಜಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಆದರೆ, ನಾವು ಮಾತ್ರ ಶಾಂತಿಯುತವಾಗಿ ಹೋರಾಟ ನಡೆಸೋಣ’ ಎಂದು ಕರೆ ನೀಡಿದರು.

ಬಿವಿಎಸ್‌ ವತಿಯಿಂದ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರಿಗೆ ₹1 ಲಕ್ಷ ಪುರಸ್ಕಾರ ವಿತರಿಸಲಾಯಿತು.

₹5 ಲಕ್ಷ ಬಹುಮಾನ: ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ₹5 ಲಕ್ಷ ಮೌಲ್ಯದ ಬಹುಮಾನ ನೀಡಲಾಯಿತು.

ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಕಾರ್ಕಳದ ಮಹಮ್ಮದ್ ರಿಯಾಜ್ ಅವರಿಗೆ ₹1 ಲಕ್ಷ, ಪಿಯು ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ತುಮಕೂರಿನ ಚಂದನಾ ಅವರಿಗೆ ₹50 ಸಾವಿರ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ ಟಿ.ಎಸ್.ಇಂಪನಾ ಅವರಿಗೆ ₹25 ಸಾವಿರ ಬಹುಮಾನ ನೀಡಲಾಯಿತು. ಒಟ್ಟು 31,969 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು