ರಾಷ್ಟ್ರಪತಿಯವರ ನಕಲಿ ಮೆಚ್ಚುಗೆ ಪತ್ರ ಪ್ರಕಟಿಸಿದ್ದ ಬೆಂಗಳೂರಿನ ವ್ಯಕ್ತಿ ಬಂಧನ

7

ರಾಷ್ಟ್ರಪತಿಯವರ ನಕಲಿ ಮೆಚ್ಚುಗೆ ಪತ್ರ ಪ್ರಕಟಿಸಿದ್ದ ಬೆಂಗಳೂರಿನ ವ್ಯಕ್ತಿ ಬಂಧನ

Published:
Updated:

ನವದೆಹಲಿ: ರಾಷ್ಟ್ರಪತಿಯವರ ನಕಲಿ ಮೆಚ್ಚುಗೆ ಪತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಆರೋಪದಲ್ಲಿ ಬೆಂಗಳೂರಿನ ಮ್ಯಾನೇಜ್‌ಮೆಂಟ್‌ ಕಾಲೇಜೊಂದರ ನಿರ್ದೇಶಕನನ್ನು ದೆಹಲಿ ಸೈಬರ್‌ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹರಿಕೃಷ್ಣ ಮರಂ ಬಂಧಿತ ಆರೋಪಿ. ರಾಷ್ಟ್ರಪತಿಯ ಪತ್ರಿಕಾ ಕಾರ್ಯದರ್ಶಿ ನೀಡಿದ ದೂರಿನ ಅನ್ವಯ ಈತನ ವಿರುದ್ಧ ಒಂದು ವರ್ಷದ ಹಿಂದೆ ಪ್ರಕರಣ ದಾಖಲಾಗಿತ್ತು.

‘ಡಿಜಿಟಲ್‌ ಮಾರ್ಕೆಟಿಂಗ್‌ ಕುರಿತು ತಾನು ಬರೆದ ಪುಸ್ತಕಕ್ಕೆ ರಾಷ್ಟ್ರಪತಿ ಮೆಚ್ಚುಗೆ ಪತ್ರ ನೀಡಿದ್ದಾರೆ ಎಂದು ಹರಿಕೃಷ್ಣ ಫೇಸ್‌ಬುಕ್‌ನಲ್ಲಿ ನಕಲಿ ಮೆಚ್ಚುಗೆ ಪತ್ರ ಪ್ರಕಟಿಸಿದ್ದ. ತನ್ನ ಪುಸ್ತಕಕ್ಕೆ ಪ್ರಚಾರ ಸಿಗಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಕರಣ ದಾಖಲಾದಾಗ ಹರಿಕೃಷ್ಣ ಅಮೆರಿಕದಲ್ಲಿದ್ದ. ಆತನನ್ನ ಸಂಪರ್ಕಿಸಿದರೂ ತನಿಖೆಗೆ ಸಹಕರಿಸಿರಲಿಲ್ಲ. ಹಾಗಾಗಿ ಆತನ ವಿರುದ್ಧ ಜಾಮೀನುರಹಿತ ವಾರಂಟ್‌ ಜಾರಿಗೊಳಿಸಿತ್ತು ಎಂದಿದ್ದಾರೆ. ಬಿ. ಫಾರ್ಮಾ ಮತ್ತು ಎಂಬಿಎ ಪದವಿ ಪಡೆದಿರುವ ಆರೋಪಿ ಬೆಂಗಳೂರಿನಲ್ಲಿ ಮ್ಯಾನೇಜ್‌ಮೆಂಟ್‌ ಕಾಲೇಜು ನಡೆಸುತ್ತಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ. 

ಒಂದು ವರ್ಷದಿಂದ ಅಮೆರಿಕದಲ್ಲಿ ನೆಲೆಸಿದ್ದ ಆರೋಪಿ ಈಚೆಗೆ ಬೆಂಗಳೂರಿಗೆ ಮರಳಿದ್ದ. ದೆಹಲಿಯ ಸೈಬರ್‌ ಕ್ರೈಂ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಭಾನು ಪ್ರತಾಪ್‌ ಪ್ರಕರಣದ ತನಿಖೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !