ಕಾನ್‌ಸ್ಟೆಬಲ್‌ಗೆ ಆವಾಜ್ ಹಾಕಿದ ಅರುಣ್‌ ಕಾರಜೋಳ

7
ಬಿಜಪಿ ನಾಯಕ ಗೋವಿಂದ ಕಾರಜೋಳ ಮಗ ಅರುಣ್ ವಿರುದ್ಧ ದೂರು ದಾಖಲು

ಕಾನ್‌ಸ್ಟೆಬಲ್‌ಗೆ ಆವಾಜ್ ಹಾಕಿದ ಅರುಣ್‌ ಕಾರಜೋಳ

Published:
Updated:

ಮುಧೋಳ (ಬಾಗಲಕೋಟೆ ಜಿಲ್ಲೆ): ‘ಪೊಲೀಸ್ ಕಾನ್‌ಸ್ಟೆಬಲ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದ ಮೇಲೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರೂ ಆದ ಶಾಸಕ ಗೋವಿಂದ ಕಾರಜೋಳ ಪುತ್ರ, ಅರುಣ್ ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ.

ನಗರದಲ್ಲಿ ಭಾನುವಾರ ರಾತ್ರಿ ಅರುಣ್‌ ಕಾರಜೋಳ ಬೆಂಬಲಿಗರು ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದರು. ಅದನ್ನು ಕಾನ್‌ಸ್ಟೆಬಲ್‌ ಮಲ್ಲೇಶ ಲಮಾಣಿ ಪ್ರಶ್ನಿಸಿದ್ದರು ಎನ್ನಲಾಗಿದೆ.

ವಿಚಾರ ತಿಳಿದ ಅರುಣ್‌ ಕಾನ್‌ಸ್ಟೆಬಲ್‌ ಮಲ್ಲೇಶ ಅವರಿಗೆ ರಾತ್ರಿ ಕರೆ ಮಾಡಿ ನಿಂದಿಸಿದ್ದಾರೆ, ಮರುದಿನ ಮತ್ತೆ ಕರ್ತವ್ಯದಲ್ಲಿದ್ದ ಮಲ್ಲೇಶ ಲಮಾಣಿ ಅವರಿದ್ದ ಸ್ಥಳಕ್ಕೆ ತೆರಳಿದ್ದ ಅರುಣ್‌ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾನ್‌ಸ್ಟೆಬಲ್‌ ಜೊತೆ ಅರುಣ್‌ ಕಾರಜೋಳ ಮೊಬೈಲ್‌ಫೋನ್‌ನಲ್ಲಿ ನಡೆಸಿದ ಸಂಭಾಷಣೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

‘ಮೊಬೈಲ್‌ಫೋನ್‌ನಲ್ಲಿ ಕಾನ್‌ಸ್ಟೆಬಲ್‌ ಜೊತೆ ಅಸಭ್ಯವಾಗಿ ಮಾತನಾಡಿದ್ದಕ್ಕೆ ಹಾಗೂ ಕರ್ತವ್ಯದಲ್ಲಿದ್ದ ವೇಳೆ ನಿಂದಿಸಿ ಬೆದರಿಕೆ ಹಾಕಿದ ಕಾರಣಕ್ಕೆ ಅರುಣ್‌ ಕಾರಜೋಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದೇವೆ. ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ಅರುಣ್‌ ಕಾರಜೋಳ ಅವರ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಸಂಪರ್ಕಿಸಿದರೂ ಅವರ ಮೊಬೈಲ್‌ಫೋನ್‌ ಸ್ವಿಚ್ಡ್ ಆಫ್ ಆಗಿತ್ತು.

ಮೊಬೈಲ್‌ ಫೋನ್‌ ಸಂಭಾಷಣೆ ವಿವರ...

ಅರುಣ್: ಹಲೋ..

ಕಾನ್‌ಸ್ಟೆಬಲ್‌ ಲಮಾಣಿ: ಹಲೋ ಹೇಳ್ರಿ..

ಅರುಣ್: ಬಾದಾಮಿ ಅವರಲ್ಲಾ, ಯಾರ್ರೀ, ಲಮಾಣಿ ಅವರು

ಕಾನ್‌ಸ್ಟೆಬಲ್‌: ಹೌದ್ರೀ

ಅರುಣ್‌ ಕಾರಜೋಳ ಮಾತಾಡ್ತಿನ್ರಿ,

ಕಾನ್‌ಸ್ಟೆಬಲ್‌: ಹೇಳ್ರಿ,ಹೇಳ್ರಿ ಸರ

ಅರುಣ್‌: ಎಲ್ಲದೀರಿ ನೀವು,

ಕಾನ್‌ಸ್ಟೆಬಲ್‌: ಹಾ ಇಲ್ಲೇ ಮನೆ ಕಡೆ ಇದ್ದೆರಿ,

ಅರುಣ್‌: ಬಂದು ಭೆಟ್ಟಿ ಆಗಬೇಕಲ್ಲಾ ನನಗ,

ಕಾನ್‌ಸ್ಟೆಬಲ್‌: ಹ್ಯಾಂಗ ಸರ,

ಅರುಣ್‌: ಬಂದ್ ಭೆಟ್ಟಿ ಆಗಬೇಕು ಅಂದೆ,

ಕಾನ್‌ಸ್ಟೆಬಲ್‌: ಹಾ ಯದುಕ್ರಿ ಸರ,

ಅರುಣ್‌: ಅಲ್ಲಾ ಭೆಟ್ಟಿ ಆಗೂದುಲ್ಲಾ,

ಕಾನ್‌ಸ್ಟೆಬಲ್‌: ಏನಾತ್‌ ಹೇಳ್ರಿ,

ಅರುಣ್‌: ಏಯ್‌ ನೀ ಧ್ವನಿ ಸಣ್ಣದು ಮಾಡಿ ಮಾತಾಡು,

ಕಾನ್‌ಸ್ಟೆಬಲ್‌: ಹಲೋ,

ಅರುಣ್‌: ದನಿ ಸಣ್ಣದು ಮಾಡಿ ಮಾತಾಡು ಅಂದೆ.

ಕಾನ್‌ಸ್ಟೆಬಲ್‌: ಹಾ ಹೇಳ್ರಿ ಮತ್ತೇನು ಮಾತಾಡ್ಬೇಕು ರೀ ಈಗ,

ಅರುಣ್‌: ಏಯ್ ಬಂದ್ ಭೆಟ್ಟಿ ಆಗು ಅಂದ್ರ, ನಿಂಗ ತಿಳಿಯಂಗಿಲ್ಲಾ

ಕಾನ್‌ಸ್ಟೆಬಲ್‌: ಯದುಕ್‌ ಭೆಟ್ಟಿ ಆಗಬೇಕ್ರಿ

ಅರುಣ್‌: ನಿಂಗ ಬೂಟ್‌ಲೇ ಒದಿಬೇಕಾಗೇತಿ ಅದಕ್ಕಾ,

ಕಾನ್‌ಸ್ಟೆಬಲ್‌: ಸೀದಾ ಮಾತಾಡ್ರಿ ನೀವು ಮೊದಲು,

ಅರುಣ್‌: ಏಯ್‌ ಬೋಸುಡಿಕೆ ನಿನಗೇನು ಸೀದಾ ಮಾತಾಡ್ಬೇಕ್ಲೆ ನಿನಗ

ಮುಕುಳಿ ಕಡಿತದ ಮಗನಾ. ನಮ್‌ ಮಂದೀಗ ಎತ್ತೆತ್ಲಾಗ ಮಾತಾಡ್ತೀಯಂತೆ.

ಕಾನ್‌ಸ್ಟೆಬಲ್‌: ಯಾರಿಗೆ ಮಾತಾಡೇತ್ರಿ..

ಅರುಣ್‌: ಏಯ್‌ ಬಂದು ಭೇಟಿ ಆಗು ಅಂದ್ರ ತಿಳಿತದಾ ಇಲ್ಲಾ ನಿನಗ,

ಕಾನ್‌ಸ್ಟೆಬಲ್‌: ನೀವೇ ಬರ್ರಿ ಇಲ್ಲಿ ನಾನ್‌ ಭೆಟ್ಟಿ ಆಗ್ತೇನೆ, ಸಾಹೇಬ್ರ ಹತ್ರಾ ಬರ್ರಿ, ಈಗ್ ಬಂದೆ ಅಂದರಾ ಬಾಯಾಗ ಬೂಟ್ ಇಡ್ತೀನಿ ಬೋಸೂಡಿ ಮಗನೇ ನಿನಗೆ.

ಕಾನ್‌ಸ್ಟೆಬಲ್‌: ಏನು?

ಅರುಣ್‌: ಏಯ್‌ ಏನು ಅಂತಾ ಕೇಳ್ತೀಯ. ಲೇ ಚಂದಾಗೆ ಮಾತಾಡ್, ತಿಳಿತದಾ ಇಲ್ಲ ನಿನಗೆ

ಕಾನ್‌ಸ್ಟೆಬಲ್‌: ಯಾರ್ ಚಂದಾಗಿ ಮಾತಾಡ್ತಾರೆ, ಅನ್ನೋದು, ಸರಿಯಾಗಿ ಮಾತಾಡ್ರಿ, ನೀವು ಮೊದಲು

ಏಯ್ ಬಂದ್ ಭೇಟಿಯಾಗು ಅಂದ್ರ ಯದುಕ್ಕೆ ಅಂತಾ ಕೇಳ್ತೀಯೇನು ನೀನ್ ನನಗೆ..

ಕಾನ್‌ಸ್ಟೆಬಲ್‌: ನಿಮಗ್‌ ಯಾದುಕ್ಕ ಭೇಟಿ ಆಗ್ಬೇಕ್ರಿ ನಾನು..

ಅರುಣ್‌: ನಿನ್ನ ಬಾಯಾಗ ಬೂಟ್ ಇಡ್ಬೇಕಾಗೇತಿ ಅದುಕ್ಕೆ..

ಕಾನ್‌ಸ್ಟೆಬಲ್‌: ನೀವು ಸೀದಾ ಮಾತಾಡ್ರಿ, ನಾವ್‌ ಮಾತಾಡ್ಬೇಕಾಗುತ್ತೆ ಇನ್ನ.

ಅರುಣ್‌: ಏಯ್ ನೀನು ಮಾತಾಡಿದೆ ಅಂದ್ರೆ, ಬೋಸೂಡಿ ಮಗನೇ ಅಡ್ಡಾದಿಡ್ಡಿ ಸೀಳ್ತೇನಿ ನಿನಗ, ಏನ್ ನಾಟಕ್ ಹಚ್ಚೀಯ ಇದನ್ನ, ಏಳೋರ್, ಕೇಳೋರ್ ಇಲ್ಲ ಅಂತಾ ತಿಳದರೀ...

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 3

  Sad
 • 1

  Frustrated
 • 13

  Angry

Comments:

0 comments

Write the first review for this !