ಸೋಮವಾರ, ಅಕ್ಟೋಬರ್ 14, 2019
29 °C

ಸುಳ್ಯದ ಯುವಕನಿಗೆ ಅಬುಧಾಬಿ ಲಾಟರಿ

Published:
Updated:

ಮಂಗಳೂರು: ಸುಳ್ಯ ತಾಲ್ಲೂಕಿನ ಜಟ್ಟಿಪಳ್ಳದ ಜೆ.ಎ. ಮೊಹಮ್ಮದ್‌ ಫಯಾಜ್‌ ಅವರಿಗೆ ಅಬುಧಾಬಿಯ ಬಿಗ್‌ ಟಿಕೆಟ್‌ ರಾಫೆಲ್‌ ಡ್ರಾದಲ್ಲಿ ₹ 23 ಕೋಟಿ ಬಂಪರ್ ಬಹುಮಾನ ದೊರೆತಿದೆ.

ಮೊಹಮ್ಮದ್‌ ಫಯಾಜ್, ಸದ್ಯಕ್ಕೆ ಮುಂಬೈನಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಪರ್ ಬಹುಮಾನ ಬಂದಿರುವ ವಿಷಯ ತಿಳಿಸಲು ಬಿಗ್ ಟಿಕೆಟ್ ಡ್ರಾದ ಮುಖ್ಯಸ್ಥ ರಿಚರ್ಡ್, ನಾಲ್ಕು ಬಾರಿ ಕರೆ ಮಾಡಿದಾಗಲೂ ಫಯಾಜ್ ಬೇರೊಂದು ಕರೆಯಲ್ಲಿ ನಿರತರಾಗಿದ್ದರು. ನಾಲ್ಕನೇ ಬಾರಿ ರಿಚರ್ಡ್ ಅವರು ಕರೆ ಮಾಡಿದಾಗ, ಫಯಾಜ್ ಅವರಿಗೆ ತಮ್ಮ ಅದೃಷ್ಟವನ್ನು ನಂಬಲು ಆಗಲಿಲ್ಲ.

‘ಸೆಪ್ಟೆಂಬರ್ ಕೊನೆಯ ದಿನ ನಾನು ಮತ್ತು ನನ್ನ ರೂಮ್‌ಮೇಟ್‌ಗಳು ಸೇರಿ ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿದ್ದೆವು. ಯಾರಿಗೆ ಎಷ್ಟು ಮೊತ್ತ ಸಿಗುತ್ತದೆ ಎನ್ನುವುದು ಇನ್ನು ನಿರ್ಧರಿಸಿಲ್ಲ. ನಾನು ನಿಜವಾಗಿಯೂ ಅದೃಷ್ಟಶಾಲಿ ವಿಜೇತ’ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

Post Comments (+)