ವಿಧಾನಮಂಡಲ ಅಧಿವೇಶನ: ಕಲಾಪ ಒಂದು ದಿನ ವಿಸ್ತರಣೆ

7

ವಿಧಾನಮಂಡಲ ಅಧಿವೇಶನ: ಕಲಾಪ ಒಂದು ದಿನ ವಿಸ್ತರಣೆ

Published:
Updated:

ಬೆಂಗಳೂರು: ವಿಧಾನಮಂಡಲದ ಅಧಿವೇಶನವನ್ನು ಶುಕ್ರವಾರವೂ (ಜುಲೈ 13) ನಡೆಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ‘ಬಜೆಟ್‌ ಮೇಲೆ ಸಾಕಷ್ಟು ಸದಸ್ಯರು ಮಾತನಾಡಲು ಬಾಕಿ ಇದೆ. ಗುರುವಾರ ಇಡೀ ದಿನ ಅವರಿಗೆ ಮಾತನಾಡಲು ಅವಕಾಶ ನೀಡಿ ಸರ್ಕಾರ ಶುಕ್ರವಾರ ಉತ್ತರ ನೀಡಬೇಕು’ ಎಂದು ಮನವಿ ಮಾಡಿದರು.

‘ಕಲಾಪ ನಡೆಸಲು ನನ್ನ ಅಭ್ಯಂತರ ಇಲ್ಲ. ಕಲಾಪ ಸಲಹಾ ಸಮಿತಿಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳೋಣ’ ಎಂದರು. ಬಳಿಕ ಸಮಿತಿ ಸಭೆ ನಡೆಯಿತು. ‘ಶುಕ್ರವಾರ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆಗಳು ಹಾಗೂ ಮಸೂದೆಗಳ ಮಂಡನೆಗೆ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ರಮೇಶ್‌ ಕುಮಾರ್‌ ಪ್ರಕಟಿಸಿದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !