ಭಾನುವಾರ, ಫೆಬ್ರವರಿ 23, 2020
19 °C

ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು: ಕಾಂಗ್ರೆಸ್‌ ಮುಖಂಡ ಜಿ. ಪರಮೇಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಂಪುಟ ವಿಸ್ತರಣೆ ವೇಳೆ ಬಿಜೆಪಿಯಲ್ಲಿ ಒಳ ಬೇಗುದಿ ಬಯಲಾಗಿದ್ದು ಇಂದಿನಿಂದ ಅಸಲಿ ಜಗಳ ಶುರುವಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಶಾಸಕ ಜಿ. ಪರಮೇಶ್ವರ್ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಪಕ್ಷದ ಹಿರಿಯರು ಅಸಮಾಧಾನಗೊಂಡಿದ್ದಾರೆ. ಕೆಲವರು ಬಹಿರಂಗವಾಗಿಯೇ ತಮ್ಮ ಬೇಸರ ತೋಡಿಕೊಂಡಿದ್ದಾರೆ ಎಂದರು. ಸಂಪುಟ ವಿಸ್ತರಣೆಗೆ ಇಷ್ಟು ದಿನ ಬೇಕಾಯಿತು. ಆದರೂ, ಇನ್ನೂ ಖಾತೆ ಹಂಚಿಕೆಯಾಗಿಲ್ಲ. ಬಿಜೆಪಿಯ ಸದ್ಯದ ಸ್ಥಿತಿ ನೋಡಿದರೆ, ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ಆಯ್ಕೆ ನಡೆಯಲಿದೆ ಎಂದ ಅವರು, ಪಕ್ಷದೊಳಗೆ ಮೂಲ ಕಾಂಗ್ರೆಸ್‌ ಮತ್ತು ವಲಸಿಗರು ಎಂಬ ಭೇದ ಭಾವ ಇಲ್ಲ ಎಂದರು. ಒಮ್ಮೆ ನಮ್ಮ‌ ಪಕ್ಷದ ತತ್ವ ಒಪ್ಪಿಕೊಂಡು ಬಂದವರು ನಮ್ಮ ಪಕ್ಷದವರೇ ಆಗುತ್ತಾರೆ. ಒಂದೊಮ್ಮೆ ನಾವು ವಲಸಿಗ ಅನ್ನೋ ಭಾವನೆ ನಮ್ಮಲ್ಲಿ ಇದ್ರೆ ಅವರಿಗೆ ಅಧಿಕಾರ ನೀಡುತ್ತಿರಲಿಲ್ಲ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು