ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ಯಂತ್ರದಲ್ಲಿ ಸ್ಕಿಮ್ಮರ್ ಪತ್ತೆ !

ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ
Last Updated 3 ಡಿಸೆಂಬರ್ 2019, 2:09 IST
ಅಕ್ಷರ ಗಾತ್ರ

ಬೆಂಗಳೂರು: ಜಾಲಹಳ್ಳಿ ಠಾಣೆ ವ್ಯಾ‍ಪ್ತಿಯಲ್ಲಿರುವ ಎಟಿಎಂ ಘಟಕದ ಯಂತ್ರದಲ್ಲಿ ಸ್ಕಿಮ್ಮರ್ ಉಪಕರಣ ಹಾಗೂ ಗುಪ್ತ ಕ್ಯಾಮೆರಾ ಪತ್ತೆಯಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಯಂತ್ರಕ್ಕೆ ಉಪಕರಣ ಅಳವಡಿಸಿದ್ದ ಆರೋಪಿಗಳು, ಅದರ ಸಮೀಪದಲ್ಲೇ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಸ್ಥಳೀಯರೇ ಅವರನ್ನು ಬೆನ್ನಟ್ಟಿ ಹಿಡಿದು ನಮಗೆ ಒಪ್ಪಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಎಟಿಎಂ ಘಟಕಕ್ಕೆ ಬರುವ ಗ್ರಾಹಕರ ಕಾರ್ಡ್‌ ಮಾಹಿತಿ ಕದ್ದು, ನಕಲಿ ಕಾರ್ಡ್‌ಗಳನ್ನು ಸೃಷ್ಟಿಸಿ ಖಾತೆಗೆ ಕನ್ನ ಹಾಕಲು ಆರೋಪಿಗಳು ಸಂಚು ರೂಪಿಸಿದ್ದರು. ಅದರಂತೆ ಘಟಕಕ್ಕೆ ಬಂದು ಉಪಕರಣ ಹಾಗೂ ಕ್ಯಾಮೆರಾ ಅಳವಡಿಸಿದ್ದರು’ ಎಂದರು.

‘ಶನಿವಾರ ಬೆಳಿಗ್ಗೆಯಿಂದ ಹಲವರು ಘಟಕಕ್ಕೆ ಬಂದು ಹೋಗಿದ್ದರು. ಅವರೆಲ್ಲರ ಕಾರ್ಡ್ ಮಾಹಿತಿ ಉಪಕರಣದಲ್ಲಿ ದಾಖಲಾಗಿತ್ತು. ಸಂಜೆ ಘಟಕಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಸ್ಕಿಮ್ಮರ್ ಉಪಕರಣವಿರುವುದನ್ನು ಕಂಡಿದ್ದರು. ಸ್ಥಳೀಯರಿಗೂ ವಿಷಯ ತಿಳಿಸಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT