ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ವಿ.ವಿಗೆ ಪ್ರಶಸ್ತಿ

ದಕ್ಷಿಣ ವಲಯ ಕೊಕ್ಕೊ: ಮಂಗಳೂರು ವಿಶ್ವವಿದ್ಯಾಲಯ ರನ್ನರ್ ಅಪ್
Last Updated 26 ಡಿಸೆಂಬರ್ 2019, 20:13 IST
ಅಕ್ಷರ ಗಾತ್ರ

ಶಂಕರಘಟ್ಟ (ಶಿವಮೊಗ್ಗ): ಆತಿಥೇಯ ಕುವೆಂಪು ವಿಶ್ವವಿದ್ಯಾಲಯ, ಪ್ರಬಲ ದಾವಣಗೆರೆ ವಿಶ್ವವಿದ್ಯಾಲಯ ತಂಡ ವನ್ನು ಮಣಿಸಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಆತಿಥ್ಯ ವಹಿಸಿದ್ದ ಕುವೆಂಪು ವಿಶ್ವವಿ ದ್ಯಾಲಯ ತಂಡವು ಸೆಮಿಫೈನಲ್‌ ಲೀಗ್‌ ನಲ್ಲಿ ಅಗ್ರಸ್ಥಾನದೊಡನೆ ಚಾಂಪಿಯನ್‌ ಆಗಿ ಹೊರಹೊಮ್ಮಿತು.ಮಂಗಳೂರು ವಿಶ್ವವಿದ್ಯಾ ಲಯ, ದಾವಣಗೆರೆ ವಿಶ್ವವಿದ್ಯಾಲಯ ಮತ್ತು ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದವು.

ಈ ನಾಲ್ಕು ತಂಡಗಳು ಇದೇ 28ರಿಂದ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಕುವೆಂಪು ವಿಶ್ವವಿದ್ಯಾಲಯ ತಂಡವು ದಾವಣಗೆರೆ ವಿಶ್ವವಿದ್ಯಾಲಯ ತಂಡದ ವಿರುದ್ಧ (15–12), ಮಂಗಳೂರು ವಿಶ್ವವಿದ್ಯಾಲಯ ತಂಡವು 13–12 ರಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ತಂಡದ ಎದುರು ಜಯ ಸಾಧಿಸಿದವು.ದಾವಣಗೆರೆ ವಿಶ್ವವಿದ್ಯಾಲಯ ತಂಡವು 11– 6 ರಿಂದ ಕ್ಯಾಲಿಕಟ್ ವಿರುದ್ಧ ಜಯ ಗಳಿಸಿತು.

ಮಂಗಳೂರು ವಿಶ್ವವಿದ್ಯಾಲಯದ ಕಶ್ಯಪ್, ಮಹೇಶ್ ಮತ್ತು ಮನು ಅವರ ಡೈವ್ ಮತ್ತು ಚೇಸಿಂಗ್‍ಗಳು ಗಮನಸೆಳೆದವು. ದಾವಣಗೆರೆ ಪರ ಅರುಣ, ಭರತ್‍ಕುಮಾರ್ ಉತ್ತಮ ಆಟವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT