ಕುಮಾರಸ್ವಾಮಿ ಒಬ್ಬ ಹೇಡಿ: ಆಯನೂರು ಮಂಜುನಾಥ್‌ ವಾಗ್ದಾಳಿ

7

ಕುಮಾರಸ್ವಾಮಿ ಒಬ್ಬ ಹೇಡಿ: ಆಯನೂರು ಮಂಜುನಾಥ್‌ ವಾಗ್ದಾಳಿ

Published:
Updated:

ಬೆಂಗಳೂರು: ‘ಇಂಥ ಹೇಡಿ ಮುಖ್ಯಮಂತ್ರಿಯನ್ನು ನಾನು ಯಾವತ್ತೂ ನೋಡಿಲ್ಲ. ಕಿಂಗ್‌ಪಿನ್‌ಗಳಿರುವುದು ಗಾಂಧಿನಗರದಲ್ಲಿ. ದಿನೇಶ್ ಗುಂಡೂರಾವ್ ಮೂಗಿನ ನೇರಕ್ಕೆ ಎಲ್ಲ ನಡೆಯುತ್ತಿದೆ’ ಎಂದು ಪರಿಷತ್ತು ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಮ್ಮ ಮೂಗಿನ ಕೆಳಗೆ ಎಲ್ಲವೂ ನಡೆಯುತ್ತಿದೆ. ಜೆಡಿಎಸ್‌ನವರೇ ಜೂಜು ಕೇಂದ್ರದ ಅಡ್ಡೆ ನಡೆಸುತ್ತಿದ್ದಾರೆ. ಜೆಡಿಎಸ್ ಬಳಿ ರಿಯಲ್ ಎಸ್ಟೇಟ್ ಕುಳಗಳು ಇದ್ದಾರೆ’ ಎಂದು ವಾಗ್ದಾಳಿ ‌ನಡೆಸಿದರು.

‘ಕಿಂಗ್ ನಮ್ಮಲ್ಲೇ ಇರುವುದರಿಂದ ಪಿನ್‌ಗಳು ನಿಮ್ಮ ಬಳಿ ಇರುವುದು‌. ಅದು ಬೆಳಗಾವಿ, ಹಾಸನ, ಕನಕಪುರ, ತುಮಕೂರಿನಲ್ಲಿ ಇದ್ದಾರೋ ಹುಡುಕಿ. ನೀವು ಅಸಮರ್ಥ ಮುಖ್ಯಮಂತ್ರಿ. ಮೂರು ಮಾಫಿಯಾ ಕಿಂಗ್‌ಪಿನ್ ಮೇಲೆ ಕ್ರಮ ಕೈಗೊಳ್ಳಲು ಏಕೆ ಆಗುತ್ತಿಲ್ಲ. ಸರ್ಕಾರ ತಾನಾಗೇ ಕುಸಿದು ಬಿದ್ದರೆ ನಾವು ಹೊಣೆಗಾರರಲ್ಲ’ ಎಂದರು.

‘ಕುಮಾರಸ್ವಾಮಿ ಅಧಿಕಾರಕ್ಕಾಗಿ ಇರುವವರು. ನಾವು (ಬಿಜೆಪಿಯವರು) ಆಪರೇಷನ್ ಕಮಲ ಮಾಡುತ್ತಿಲ್ಲ. ನಮ್ಮ ಶಾಸಕರನ್ನು ಸೆಳೆಯುವ ಮಾತಾನಾಡುತ್ತಿರುವುದು ಕಾಂಗ್ರೆಸ್‌, ಜೆಡಿಎಸ್ ನವರು. ಜನರ ದಾರಿ ತಪ್ಪಿಸಲು ಬಿಜೆಪಿ ಕಡೆ ಬೊಟ್ಟು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜೆಡಿಎಸ್‌ನ ವೀರೇಂದ್ರ ಗೋವಾದಲ್ಲಿ ಜೂಜು ಅಡ್ಡೆಯನ್ನು ನಡೆಸುತ್ತಿದ್ದರು. ಇದು ಕಾಂಗ್ರೆಸ್‌ನವರಿಗೆ ಗೊತ್ತಿಲ್ಲವೇ, ವಚನ ಭ್ರಷ್ಟರ ಜೊತೆ ಹೆಚ್ಚು ದಿನ ಇರಲು ಸಾಧ್ಯವಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಾಗಿದೆ. ಹಾಗಾಗಿ ಸಿದ್ದರಾಮಯ್ಯ ವಿದೇಶದಲ್ಲಿದ್ದಾರೆ ಎಂದು ವಿವರಿಸಿದರು.

ಬೆಳಗಾವಿ ಜಿಲ್ಲೆ ವಿಭಜನೆ ಸೂಕ್ಷ್ಮ ವಿಚಾರ: ‘ಬೆಳಗಾವಿ ಜಿಲ್ಲೆ ವಿಭಜನೆಯನ್ನು ರಾಜಕೀಯ ಉದ್ದೇಶಕ್ಕಾಗಿ ಮಾಡಕೂಡದು. ಬೆಳಗಾವಿ ರಾಜ್ಯದ ಗಡಿ ಜಿಲ್ಲೆಯಾಗಿದ್ದು, ಸರ್ಕಾರ ಈ ವಿಚಾರದಲ್ಲಿ ಸೂಕ್ಷ್ಮತೆ ಇಟ್ಟುಕೊಳ್ಳಬೇಕು’ ಎಂದು ಆಯನೂರು ಅಭಿಪ್ರಾಯಪಟ್ಟರು‌. ಈ ನಡೆಯಿಂದ ಭಾಷೆ, ಗಡಿ ಸಮಸ್ಯೆ ಆಗಬಾರದು. ಈ ವಿಚಾರದಲ್ಲಿ ಚರ್ಚಿಸಿ ಬಿಜೆಪಿ ನಿಲುವು ಪ್ರಕಟ ಪಡಿಸುತ್ತೇವೆ ಎಂದರು.

ಜೆಡಿಎಸ್ ರೌಡಿಗಳ ಪಕ್ಷ: ‘ಜೆಡಿಎಸ್ ಅಂದರೆ ಭೂ ಮಾಫಿಯಾ, ರೌಡಿಗಳ ಆಶ್ರಯ ತಾಣ’ ಎಂದು ಶಾಸಕ ರೇಣುಕಾಚಾರ್ಯ ಆರೋಪಿಸಿದರು.

ಕುಮಾರಸ್ವಾಮಿ ಸಮರ್ಥರಾಗಿದ್ದರೆ, ಕಿಂಗ್ ಯಾರು ಪಿನ್ ಯಾರು ಎಂಬುದಕ್ಕೆ ಉತ್ತರ ಕೊಡಬೇಕು ಎಂದು ಸವಾಲು ಹಾಕಿದರು.

ತಂದೆ, ಮಕ್ಕಳಿಗೆ ಜನರ ಮುಂದೆ ಕಣ್ಣೀರು ಹಾಕುವುದೇ ಕಾಯಕ. ಜನರನ್ನು ಮರಳು ಮಾಡೋಕೆ ಈ ನಾಟಕ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮೊಸಳೆ ಕಣ್ಣೀರು ಹಾಕುತ್ತಾರೆ. ಅವರದ್ದು ಕುರ್ಚಿಗಾಗಿ ನಾಟಕ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಪತನ ಆಗುತ್ತೆ ಎಂಬ ಆತಂಕದಿಂದ ಹಾಗೆ ಮಾತನಾಡುತ್ತಿದ್ದಾರೆ. ಯಡಿಯೂರಪ್ಪರಿಗೆ ವಂಚನೆ ಮಾಡಿದ್ದು ಜೆಡಿಎಸ್. ಜೆಡಿಎಸ್ ವಚನಭ್ರಷ್ಟ ಪಕ್ಷ. ಕುಮಾರಸ್ವಾಮಿ, ದೇವೇಗೌಡರಿಗೆ ಸರ್ಕಾರ ಬಿದ್ದು ಹೋಗುತ್ತಿರುವುದು ಗೊತ್ತಾಗಿದೆ. ಅದಕ್ಕಾಗಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅರೋಪಿಸಿದರು.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 1

  Sad
 • 1

  Frustrated
 • 17

  Angry

Comments:

0 comments

Write the first review for this !