ಮಂಗಳವಾರ, ನವೆಂಬರ್ 19, 2019
23 °C

ಅಯೋಧ್ಯೆ ತೀರ್ಪು: ಮುಸ್ಲಿಮರಿಂದ ಸ್ವಾಗತ, ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ

Published:
Updated:

ಮೈಸೂರು: ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಸ್ವಾಗತಿಸಿ ಮುಸ್ಲಿಮರು ಶನಿವಾರ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. 

ನಗರದ ವಿದ್ಯಾರಣ್ಯಾಪುರಂನ ಶಾಸಕ ಎಸ್.ಎ.ರಾಮದಾಸ್ ಅವರ ಕಚೇರಿ ಮುಂಭಾಗ ಸೇರಿದ ನೂರಾರು ಮಂದಿ ಸಿಹಿ ಹಂಚಿ ಸಂಭ್ರಮಿಸಿದರು.

ಸೋಲು ಗೆಲುವಿನ ಭಾವ ಬೇಡ
‘ದೇಶದ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ಯಾರಲ್ಲಿಯೂ ಸೋಲು, ಗೆಲುವು ಎನ್ನುವ ಭಾವನೆ ಬೇಡ. ಶಾಂತಿ, ಸೌಹಾರ್ದತೆಯಿಂದ ತೀರ್ಪನ್ನು ಗೌರವಿಸಬೇಕಾಗುತ್ತದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ತೀರ್ಪು ಹೊರಬಿದ್ದಿದೆ’ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)