ಆಯುಷ್‌ ಕೋರ್ಸ್‌: ಈ ವರ್ಷ 120 ಸೀಟುಗಳು ಹೆಚ್ಚಳ

7

ಆಯುಷ್‌ ಕೋರ್ಸ್‌: ಈ ವರ್ಷ 120 ಸೀಟುಗಳು ಹೆಚ್ಚಳ

Published:
Updated:

ಬೆಂಗಳೂರು: ಈ ವರ್ಷದ ಆಯುಷ್‌ ಕೋರ್ಸ್‌ಗಳ ಸೀಟುಗಳಲ್ಲಿ ಹೆಚ್ಚಳವಾಗಿದ್ದು, ಸರ್ಕಾರಿ ಕಾಲೇಜುಗಳಲ್ಲಿ ಒಟ್ಟು 120 ಹೆಚ್ಚುವರಿ ಸೀಟುಗಳು ದೊರೆಯುತ್ತಿವೆ.

ಶಿವಮೊಗ್ಗದಲ್ಲಿ ಪ್ರಾರಂಭಗೊಂಡಿರುವ ಸರ್ಕಾರಿ ಆಯುಷ್‌ ಕಾಲೇಜು ಪ್ರಸಕ್ತ ವರ್ಷದಿಂದ ದಾಖಲಾತಿ ಪ್ರಾರಂಭವಾಗಿದ್ದು, ಅಲ್ಲಿ 60 ಸೀಟುಗಳು ದೊರೆಯಲಿವೆ. ಬೆಂಗಳೂರಿನಲ್ಲಿ 40 ಹಾಗೂ ಬಳ್ಳಾರಿಯಲ್ಲಿ 20 ಸೀಟುಗಳನ್ನು ಹೆಚ್ಚಿಸಲಾಗಿದೆ. 

64 ಖಾಸಗಿ ಕಾಲೇಜುಗಳಲ್ಲಿ 27 ಕಾಲೇಜುಗಳಿಗೆ ಮಾತ್ರ ಐದು ವರ್ಷಕ್ಕೆ ಅನುಮತಿ ದೊರೆತಿದ್ದು, ಅವುಗಳು ಮಾತ್ರ ಈ ಬಾರಿ ದಾಖಲಾತಿ ಮಾಡಿಕೊಳ್ಳಬಹುದಾಗಿದೆ. 

ಶುಲ್ಕ ನಿಗದಿ: ಆಯುಷ್‌ ಕೋರ್ಸ್‌ಗಳ ಶುಲ್ಕವನ್ನು ಸರ್ಕಾರ ಶುಕ್ರವಾರ ನಿಗದಿ ಪಡಿಸಿದೆ. ಈ ಬಾರಿ ಮ್ಯಾನೇಜ್‌ಮೆಂಟ್‌ನ ಶೇ 20ರಷ್ಟು ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲಾಗುತ್ತದೆ. ಶುಲ್ಕ ನಿಯಂತ್ರಣ ಸಮಿತಿಯ ನಿರ್ದೇಶನದಂತೆ ಅದಕ್ಕೆ ಗರಿಷ್ಟ ₹1.75 ಲಕ್ಷ ಶುಲ್ಕವನ್ನು ನಿಗದಿ ಪಡಿಸಲಾಗಿದೆ. 

ಸರ್ಕಾರಿ ಕೋಟದ ಸೀಟುಗಳಿಗೆ ₹60,000, ಮ್ಯಾನೇಜ್‌ಮೆಂಟ್‌ ಕೋಟದ ಸೀಟುಗಳಿಗೆ ಗರಿಷ್ಠ ಶುಲ್ಕ ₹1.75 ಲಕ್ಷ ಹಾಗೂ ಎನ್‌ಆರ್‌ಐ ಕೋಟಕ್ಕೆ ಗರಿಷ್ಠ ₹7 ಲಕ್ಷ ಶುಲ್ಕವನ್ನು ಎಂದು ಸರ್ಕಾರ ನಿಗದಿಪಡಿಸಿದೆ.

ಇನ್ನೊಂದು ವಾರದಲ್ಲಿ ಮೊದಲ ಹಂತದ ಸೀಟ್‌ ಮ್ಯಾಟ್ರಿಕ್ಸ್‌ ಬಿಡುಗಡೆ ಮಾಡಲು ಆಯುಷ್ ಇಲಾಖೆ ಸಿದ್ಧತೆ ನಡೆಸಿದೆ. ಸೆಪ್ಟೆಂಬರ್ 30ರೊಳಗೆ ಕೌನ್ಸೆಲಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಲು ಅವಧಿ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
**
320 
ಸರ್ಕಾರಿ ಕಾಲೇಜುಗಳ ಸೀಟುಗಳು

156
ಅನುದಾನಿತ ಕಾಲೇಜುಗಳ ಸೀಟುಗಳು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !