ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಬೀಜ ಮಾರಾಟ ಮಾಡುವುದು ರೈತರ ಬದುಕನ್ನು ಸಾಯಿಸಿದಂತೆ: ಬಿ.ಸಿ.ಪಾಟೀಲ್

Last Updated 24 ಏಪ್ರಿಲ್ 2020, 11:45 IST
ಅಕ್ಷರ ಗಾತ್ರ

ಬೆಂಗಳೂರು: ಸತ್ತ ಬೀಜಗಳನ್ನು ನಕಲಿ ಬೀಜಗಳನ್ನು ಮಾರಾಟ ಮಾಡುವುದು ರೈತರ ಬದುಕನ್ನು ಸಾಯಿಸುವಂತಹ ಮಹಾಪರಾಧವಾಗಿದೆ. ಇಂತಹ ನಕಲಿ ಬಿಡಿ ಬೀಜ ಮಾರಾಟಗಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಾವೇರಿ ಜಿಲ್ಲಾ ಕೃಷಿ ಅಧಿಕಾರಿಗಳ ತಂಡ ಸುಮಾರು ₹6 ಕೋಟಿ ಮೌಲ್ಯದ ಅಕ್ರಮ ಬಿಡಿಬೀಜಗಳ ದಾಸ್ತಾನು ವಶಪಡಿಸಿಕೊಂಡಿದ್ದು, ಕೃಷಿ ಅಧಿಕಾರಿಗಳ ಕಾರ್ಯಕ್ಕೆ ಕೃಷಿ ಸಚಿವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇಂತಹ ಕಳಪೆ ನಕಲಿ ಬೀಜ ಮಾರಾಟ ಮಾಡುವವರು ಬದುಕಿದ್ದಂತಹ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ‌.ಇಂತಹ ಕೃತ್ಯವನ್ನು ತಾವೆಂದಿಗೂ ಸಹಿಸುವುದಿಲ್ಲ. ಕೃಷಿ ಅಧಿಕಾರಿಗಳು ಮತ್ತು ವಿಚಕ್ಷಣಾ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದಾರೆ.ನಕಲಿ ಕಳಪೆ ಅಕ್ರಮ ಬೀಜವಾಗಲಿ ಗೊಬ್ಬರವಾಗಲಿ ಮಾರಾಟ ಮಾಡುವವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ.ಹಾವೇರಿಯಲ್ಲಿ ಪತ್ತೆಯಾದ ನಕಲಿ ಬಿಡಿ ಬೀಜಗಳ ದಾಸ್ತಾನು ವಶ ಪ್ರಕರಣವನ್ನು ನ್ಯಾಯಾಲಯದ ವಶಕ್ಕೆ ವಹಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT