ತಾಕತ್ತಿದ್ದರೆ ನನ್ನ ವಿರುದ್ಧದ ಕೇಸ್‌ ಓಪನ್‌ ಮಾಡಲಿ: ಯಡಿಯೂರಪ್ಪ

ಶುಕ್ರವಾರ, ಏಪ್ರಿಲ್ 19, 2019
30 °C

ತಾಕತ್ತಿದ್ದರೆ ನನ್ನ ವಿರುದ್ಧದ ಕೇಸ್‌ ಓಪನ್‌ ಮಾಡಲಿ: ಯಡಿಯೂರಪ್ಪ

Published:
Updated:
Prajavani

ಕುಂದಾಪುರ: ತಾಕತ್ತು ಇದ್ದರೆ ಮೇ23 ರ ಮೊದಲು ನನ್ನ ವಿರುದ್ಧದ ಕೇಸ್‌ಗಳನ್ನು ಓಪನ್‌ ಮಾಡಲಿ. ಮೇ.23 ರ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಹೋಗ್ತಾರೆ ಅದಾದ ಬಳಿಕ ಕೇಸ್‌ಗಳನ್ನು ನಾವೇ ಓಪನ್‌ ಮಾಡ್ತೇವೆ ಎಂದು ಬಿಜೆಪಿ ರಾಜ್ಯ  ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗುಡುಗಿದರು.

ವಂಡ್ಸೆಯ ನೆಂಪುವಿನಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ ಮೊಕದ್ದಮೆ ಮತ್ತೆ ವಿಚಾರಣೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಹೇಳಿಕೆ’ಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಎಲ್ಲವನ್ನೂ ಈ ಹಿಂದೆ ಎದುರಿಸಿದ್ದೇನೆ, ಮುಂದೆಯೂ ಎದುರಿಸುತ್ತೇನೆ ಎನ್ನುವ ವಿಶ್ವಾಸ ಇದೆ. ಮೋದಿ ಅಲೆ ಇಲ್ಲ ಎನ್ನುವ ಚಿಂತೆ ಮುಖ್ಯಮಂತ್ರಿಗೆ ಯಾಕೆ? ರಾಜ್ಯದಲ್ಲಿ ಅಪ್ಪ–ಮಕ್ಕಳ ಅಲೆ ಎಲ್ಲಿದೆ ಮಂಡ್ಯದಲ್ಲಿ ಹಣದ ಹೊಳೆ ಹರಿಯುತ್ತಿದೆ. ಸಚಿವ ಪುಟ್ಟರಾಜು ಬಳಿ ಹಣಕ್ಕಾಗಿ ಬೇಡಿಕೆ ಪ್ರಕರಣ ಒಂದು ಸ್ಯಾಂಪಲ್‌ ಮಾತ್ರ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !