ಗುರುವಾರ , ನವೆಂಬರ್ 21, 2019
20 °C

ಅಮಿತ್ ಶಾ ಭೇಟಿ ಮಾಡಿದ ಯಡಿಯೂರಪ್ಪ: ಪ್ರವಾಹ ಪರಿಹಾರ, ಅನರ್ಹ ಶಾಸಕರ ಬಗ್ಗೆ ಚರ್ಚೆ

Published:
Updated:

ನವದೆಹಲಿ: ಕೇಂದ್ರದ ಗೃಹ ಸಚಿವ ಅಮಿತ್  ಶಾ ಅವರನ್ನು ಭಾನುವಾರ ಬೆಳಿಗ್ಗೆ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರವಾಹ ಪರಿಹಾರ ಕುರಿತು  ಚರ್ಚಿಸಿದ್ದಾಗಿ ತಿಳಿಸಿದರು.

ರಾಜ್ಯದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿ ಆಗಿದೆ. ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾಗಿ ಅವರು ಭೇಟಿಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯ ಸರ್ಕಾರ ಕೊರತೆ ಎದುರಿಸುತ್ತಿದ್ದು, ಕೇಂದ್ರದಿಂದ ಅನುದಾನ ನಿರೀಕ್ಷಿಸಲಾಗುತ್ತಿದೆ. ನೆರೆಯಿಂದ ಸಂಕಷ್ಟ ಎದುರಿಸಿರುವ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೂ ಕೇಂದ್ರ ಪರಿಹಾರದ ನೆರವು  ನೀಡಿಲ್ಲ.

ಇದನ್ನೂ ಓದಿ: ‘ನಮ್ಮ ತಟ್ಟೆಗೆ ಮಣ್ಣು ಬಿದ್ದಿದೆ’: ಊಟಕ್ಕೆ ಕರೆದ ಸಿಎಂಗೆ ಅತೃಪ್ತ ಶಾಸಕರ ಆಕ್ರೋಶ

ಎಲ್ಲ ರಾಜ್ಯಗಳಿಗೂ ಒಟ್ಟಿಗೆ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪ್ರವಾಹ ಪರಿಹಾರ ಬಿಡುಗಡೆ ಮಾಡಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದರು.

ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಘೋಷಣೆ ಆಗಿದ್ದರಿಂದ ಅತಂತ್ರ ಸ್ಥಿತಿ ಎದುರಿಸುವಂತಾಗಿರುವ ಅನರ್ಹರ ಕುರಿತೂ ಇದೇ ವೇಳೆ ಯಡಿಯೂರಪ್ಪ ಚರ್ಚಿಸಿದರು ಎಂದು ತಿಳಿದುಬಂದಿದೆ. ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಅಶ್ವತ್ಥನಾರಾಯಣ, ಗೃಹ ಸಚಿವ  ಬಸವರಾಜ ಬೊಮ್ಮಾಯಿ ಈ ಸಂದರ್ಭ ಹಾಜರಿದ್ದರು.

ಇದನ್ನೂ ಓದಿ: ಅನರ್ಹ ಶಾಸಕರಿಗೆ ಚುನಾವಣೆ ಸ್ಪರ್ಧಿಸುವ ಅವಕಾಶ ಇಲ್ಲ: ಸಂಜೀವ್ ಕುಮಾರ್

ರಮೇಶ್ ಜಾರಕಿಹೊಳಿ ಅವರ ಆಪ್ತ ಸಹಾಯಕರೊಬ್ಬರು ಯಡಿಯೂರಪ್ಪ ಅವರೊಂದಿಗೆ ಅಮಿತ್ ಶಾ ಭೇಟಿಗೆ ತೆರಳಿದ್ದರು.

ಪ್ರತಿಕ್ರಿಯಿಸಿ (+)