ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಟರ್ ಬಡ್ಡಿ ಬಿಡಿ: ಬಡ್ಡಿ ರಹಿತ ಸಾಲ ಪಡಿ

ಬೀದಿ ಬದಿ ವ್ಯಾಪಾರಿಗಳ ದಿನನಿತ್ಯದ ದುಡ್ಡಿಗೆ ‘ಬಡವರ ಬಂಧು’
Last Updated 22 ನವೆಂಬರ್ 2018, 20:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿನಿತ್ಯ ಮೀಟರ್‌ ಬಡ್ಡಿ ಪಡೆದು ಸಾಲದ ಸುಳಿಯಲ್ಲಿ ಸಿಲುಕುವ ಬೀದಿಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ರಾಜ್ಯ ಸರ್ಕಾರವೇ ಬಡ್ಡಿ ರಹಿತ ಸಾಲ ನೀಡಲಿದೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಚಾಲನೆ ನೀಡಿದರು.

ಜಿಲ್ಲಾ ಸಹಕಾರ ಕೇಂದ್ರ(ಡಿಸಿಸಿ) ಬ್ಯಾಂಕುಗಳು ಮೂಲಕ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಕನಿಷ್ಠ ₹ 2 ಸಾವಿರದಿಂದ ₹ 10 ಸಾವಿರದ ವರೆಗೆ ಮೂರು ತಿಂಗಳ ಅವಧಿಗೆ ಸಾಲ ನೀಡಲಾಗುತ್ತದೆ.

ಸಾಲಗಾರರು ಬಯಸಿದರೆ ಪಿಗ್ಮಿ (ಪ್ರತಿನಿತ್ಯ ನಿರ್ದಿಷ್ಟ ಮೊತ್ತ ಪಾವತಿ) ಮೂಲಕವೂ ಸಾಲದ ಮೊತ್ತವನ್ನು ಬ್ಯಾಂಕುಗಳು ಹಿಂಪಡೆಯಬಹುದು. ಸಮರ್ಪಕವಾಗಿ ಸಾಲ ಮರುಪಾವತಿಸಿದ ಫಲಾನುಭವಿಗೆ ಸಾಲ ನವೀಕರಿಸಲು ಮತ್ತು ಶೇ 10ರಷ್ಟು ಮಿತಿ ಹೆಚ್ಚಿಸಲು (₹ 15ಸಾವಿರದವರೆಗೆ) ಅವಕಾಶ ನೀಡಲಾಗಿದೆ.

ಪ್ರತಿ ತ್ರೈಮಾಸಿಕ ಹೊರಬಾಕಿ ಆಧರಿಸಿ, ಬಡ್ಡಿ ಸಹಾಯಧನವನ್ನು ಕ್ಲೇಮ್‌ ಮಾಡಿದರೆ, ಶೇ 10ರ ಬಡ್ಡಿ
ದರದಲ್ಲಿ ಮೊತ್ತವನ್ನು ಬ್ಯಾಂಕುಗಳಿಗೆ ಸರ್ಕಾರ ಭರಿಸಲಿದೆ.

ಸಾಲ ಪಡೆಯುವ ವಿಧಾನ

ಗುರುತಿನ ಚೀಟಿ ಮತ್ತು ವ್ಯಾಪಾರ ಸ್ಥಳದ ಫೋಟೊದೊಂದಿಗೆ ನಿಗದಿತ ಬ್ಯಾಂಕ್‌ನಲ್ಲಿ ಶೂನ್ಯ ಬ್ಯಾಲೆನ್ಸ್‌ ಖಾತೆ ತೆರೆಯಬೇಕು

ಸಾಲಕ್ಕೆ ಅರ್ಜಿ ಸಲ್ಲಿಸಬೇಕು

ಬ್ಯಾಂಕುಗಳು ಅರ್ಹರಿಗೆ ಸಾಲ ನೀಡಲಿವೆ

ಮೂರು ತಿಂಗಳ ಒಳಗೆ ಸಾಲದ ಮರುಪಾವತಿ

ಇವರು ಫಲಾನುಭವಿಗಳು

* ತಳ್ಳುಬಂಡಿ, ಮೋಟಾರು ವಾಹನಗಳಲ್ಲಿ ಪಾನೀಯ, ಊಟ ವಿತರಿಸುವವರು

* ಮನೆಮನೆಗಳಿಗೆ ತರಕಾರಿ, ಹೂ, ಹಣ್ಣು, ಕಾಯಿ ಮಾರುವವರು. ಬುಟ್ಟಿ ವ್ಯಾಪಾರಿಗಳು

* ಪಾದರಕ್ಷೆ ರಿಪೇರಿ, ಮಾರಾಟ ಮಾಡುವವರು

* ಆಟದ ಸಾಮಾನು ಗೃಹೋಪಯೋಗಿ ವಸ್ತು ಮಾರುವವರು

ಇವರಿಗೆ ಅನ್ವಯಿಸುವುದಿಲ್ಲ?

* ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವವರಿಗೆ, ಪರಿಸರ ಹಾನಿ ವಸ್ತುಗಳ ಮಾರಾಟಗಾರರಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT