ಗುರುವಾರ , ಅಕ್ಟೋಬರ್ 17, 2019
27 °C

ಮುಖ್ಯಮಂತ್ರಿ ಬೆಂಗಾವಲು ಪಡೆ ವಾಹನ ಅಪಘಾತ: ಮೂವರಿಗೆ ಗಾಯ

Published:
Updated:

ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಗಾವಲು (ಎಸ್ಕಾರ್ಟ್) ನೀಡಿ ಜಿಲ್ಲೆಗೆ ಕರೆತರಲು ಹೊರಟಿದ್ದ ಪೊಲೀಸ್ ಜೀಪ್ ಬೆಳಗಾವಿ ಜಿಲ್ಲೆ ರಾಯಭಾಗ ಕಪ್ಪಲಗುದ್ದಿ ಕ್ರಾಸ್ ಬಳಿ  ಉರುಳಿ ಬಿದ್ದಿದೆ.

ಅಪಘಾತದಲ್ಲಿ ಇಳಕಲ್ ಗ್ರಾಮಾಂತರ ಠಾಣೆ ಪಿಎಸ್ ಐ ಮಂಜುನಾಥ ರಾಥೋಡ, ಶಹರ ಠಾಣೆ ಪಿಎಸ್ಹೈ ಶ್ರೀಕುಮಾರ ಹಾಡಕರ್ ಚಾಲಕ ಶಿವಾನಂದ ಕಟ್ಟಿಮನಿ ಗಾಯಗೊಂಡಿದ್ದಾರೆ.

ಜೀಪು ಜಖಂಗೊಂಡಿದೆ. ಗಾಯಾಳುಗಳಿಗೆ ರಾಯಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕ್ರಮಗಳ ಪರಿಶೀಲಿಸಲು ಯಡಿಯೂರಪ್ಪ ಬೆಳಗಾವಿ ಜಿಲ್ಲೆ ಮೂಲಕ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಹಾಲಿಂಗಪುರಕ್ಕೆ ಬರಲಿದ್ದಾರೆ. ಅವರನ್ನು ಜಿಲ್ಲೆಗೆ ಕರೆತರಲು ಎಸ್ಕಾರ್ಟ್ ವಾಹನ ತೆರಳಿತ್ತು. ಅಲ್ಲಿ ಸಿಎಂ ಬರುವ ಮುನ್ನ ತಾಲೀಮು ನಡೆಸಲು ಮುಂದಾಗಿದ್ದು, ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿ ಅಲ್ಲಿ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ನಂತರ ಬೇರೊಂದು ವಾಹನ ಕಳುಹಿಸಿಕೊಡಲಾಯಿತು.

Post Comments (+)