‘ಬಹುರೂಪಿ’ಗೆ ವಿಧ್ಯುಕ್ತ ಚಾಲನೆ

7
ಮೈಸೂರಿನ ರಂಗಾಯಣದಲ್ಲಿ ಆಯೋಜನೆ

‘ಬಹುರೂಪಿ’ಗೆ ವಿಧ್ಯುಕ್ತ ಚಾಲನೆ

Published:
Updated:

ಮೈಸೂರು: ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಶನಿವಾರ ಸಂಜೆ ಸಾಂಸ್ಕೃತಿಕ ನಗರಿಯಲ್ಲಿ ವರ್ಣರಂಜಿತ ಚಾಲನೆ ಲಭಿಸಿತು.

ರಂಗಾಯಣದ ವತಿಯಿಂದ ಈ ಬಾರಿ ‘ಲಿಂಗ ಸಮಾನತೆ’ ಶೀರ್ಷಿಕೆ ಅಡಿಯಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಜ. 18ರ ವರೆಗೆ ನಡೆಯಲಿದೆ.

ಕಲಾಮಂದಿರದ ವನರಂಗದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಸನ್ನ ಚಾಲನೆ ನೀಡಿದರು.

ಏಳು ದಿನ ನಡೆಯಲಿರುವ ನಾಟಕೋತ್ಸವದಲ್ಲಿ ಬಹುಭಾಷಾ ನಾಟಕ ಮತ್ತು ಚಲನಚಿತ್ರಗಳ ಪ್ರದರ್ಶನ, ವಿಚಾರ ಸಂಕಿರಣ, ಭಿತ್ತಿಚಿತ್ರ ಪ್ರದರ್ಶನ ನಡೆಯಲಿದೆ. ಕನ್ನಡದ ಆರು ನಾಟಕಗಳ ಜತೆಗೆ ವಿವಿಧ ರಾಜ್ಯಗಳ 12 ಭಾಷೆಗಳ ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಮೂರು ಚಲನಚಿತ್ರಗಳ ಪ್ರದರ್ಶನವೂ ಇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !