ಭಾನುವಾರ, ಆಗಸ್ಟ್ 18, 2019
26 °C

ಬಕ್ರೀದ್‌ ಸಂಭ್ರಮ Live | ಜಮ್ಮು–ಕಾಶ್ಮೀರದಲ್ಲಿ 10 ಸಾವಿರ ಜನರಿಂದ ಪ್ರಾರ್ಥನೆ

Published:
Updated:

ದೇಶದಾದ್ಯಂತ ಮುಸ್ಲಿಮರಿಗೆ ಬಕ್ರೀದ್ ಹಬ್ಬದ ಸಂಭ್ರಮ. ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ದೇಶದೆಲ್ಲೆಡೆ ಮತ್ತು ರಾಜ್ಯದ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಂಭ್ರಮದ ತಾಜಾ ಸುದ್ದಿಗಳು ಇಲ್ಲಿವೆ.

12:00– ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 10 ಸಾವಿರ ಜನ ಈದ್ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ. ‘ಜಮ್ಮುವಿನ ಈದ್ಗಾದಲ್ಲಿ 5,000 ಜನ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಶ್ಮೀರ ಕಣಿವೆಯ ಬಾರಾಮುಲ್ಲಾ, ರಂಬಾನ್, ಅನಂತ್‌ನಾಗ್, ಶೋಪಿಯಾನ್, ಅವಂತಿಪೊರಾ, ಶ್ರೀನಗರ ಮತ್ತು ಇತರೆಡೆಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ರೋಹಿತ್ ಕನ್ಸಲ್ ತಿಳಿಸಿದ್ದಾರೆ.

11:45– ಈದ್ ಹಬ್ಬದ ಹಿನ್ನೆಲೆಯಲ್ಲಿ ರಾಜಸ್ಥಾನದ ಗಡಿ ಭಾಗದಲ್ಲಿ ಭಾರತೀಯ ಸೇನೆಯ ಯೋಧರು ನೀಡಿದ ಸಿಹಿ ತಿಂಡಿಯನ್ನು ಸ್ವೀಕರಿಸಲು ಪಾಕಿಸ್ತಾನ ಸೇನೆಯ ಯೋಧರು ನಿರಾಕರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ಹಿಂಪಡೆದ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಮುನಿಸಿಕೊಂಡಿದೆ.

11:15– ಮಂಗಳೂರು: ಇತಿಹಾಸ ಪ್ರಸಿದ್ದ ಉಳ್ಳಾಲ ಸೈಯ್ಯದ್ ಮದನಿ ದರ್ಗಾದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನಡೆಯಿತು. ಮಾಜಿ ಸಚಿವ ಯು.ಟಿ ಖಾದರ್, ‘ತ್ಯಾಗ ಬಲಿದಾನದ ಸಂಕೇತವಾಗಿರುವ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಹಾಗೂ ನೆರೆ ಸಂತ್ರಸ್ತರಿಗೆ ನೆರವಾಗುವಂತೆ’ ಮನವಿ ಮಾಡಿಕೊಂಡರು.

11:00– ತುಮಕೂರು: ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ಮುಸ್ಲಿಮರು ನಗರದ ಕುಣಿಗಲ್ ರಸ್ತೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸಂಸದ ಜಿ.ಎಸ್ ಬಸವರಾಜ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಸೇರಿದಂತೆ ಹಲವರು ಶುಭಾಶಯ ಕೋರಿದರು.

ಮಾಜಿ ಶಾಸಕರು ಹಾಗೂ ಮುಖಂಡರಾದ ಶಫೀ ಅಹಮ್ಮದ್, ಡಾ.ರಫೀಕ್ ಅಹಮ್ಮದ್ , ವಕ್ಫ್ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಮುಷ್ತಾಕ್ ಅಹಮ್ಮದ್ ಇದ್ದರು.

10:30– ಪ್ರವಾಹ ಸಂತ್ರಸ್ತರ ಆರೋಗ್ಯಕ್ಕೆ ಪ್ರಾರ್ಥನೆ

ಬೆಳಗಾವಿ: ಬೈಲಹೊಂಗಲದಲ್ಲಿ ಮುಸ್ಲಿಮರು ಬಕ್ರೀದ್ ಅಂಗವಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.  ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ಆರೋಗ್ಯ ಕಾಪಾಡುವಂತೆ ಪಾರ್ಥಿಸಿದರು.

ದೇಶದಾದ್ಯಂತ ಇಂದು ಈದ್ ಉಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಹಲವೆಡೆ ಮುಸ್ಲಿಮರು ಮುಂಜಾನೆಯೇ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.


ಬೆಂಗಳೂರಿನ ಮೈಸೂರು ರಸ್ತೆ ಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಜಾವಾಣಿ ಚಿತ್ರ: ರಂಜು ಪಿ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಜನತೆಗೆ ಈದ್ ಉಲ್ ಫಿತರ್ ಶುಭಾಶಯ ಕೋರಿದ್ದಾರೆ.

ಇವನ್ನೂ ಓದಿ...

ಬಕ್ರೀದ್‌: ಅಮೀನಗಡ ಕುರಿಗೆ ಹೆಚ್ಚಿದ ಬೇಡಿಕೆ

ಬಕ್ರೀದ್‌ ಆಚರಣೆಯ ಐತಿಹ್ಯ; ಮಹತ್ವ..!

ವಿಶ್ವ ಭಾತೃತ್ವದ ಸಂಕೇತ ಬಕ್ರೀದ್

Post Comments (+)