ಶನಿವಾರ, ಸೆಪ್ಟೆಂಬರ್ 18, 2021
27 °C

ಬಳ್ಳಾರಿ: ಹೊಸಪೇಟೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ‌ ಜನರ ಓಡಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಶನಿವಾರ ರಾತ್ರಿಯಿಂದಲೇ ಸಂಪೂರ್ಣ ಲಾಕ್ ಡೌನ್ ಇದ್ದರೂ ಸಹ‌ ಜನ ಅದನ್ನು ಲೆಕ್ಕಿಸದೇ ಭಾನುವಾರ ನಗರದ ಕೆಲವೆಡೆ ಓಡಾಡುತ್ತಿರುವುದು ಕಂಡು ಬಂತು.

ಅಷ್ಟೇ ಅಲ್ಲ, ನಗರದ ಸ್ಟೇಶನ್ ರಸ್ತೆಯಲ್ಲಿ ದಿನಸಿ ಮಳಿಗೆಗಳು ಕೂಡ ತೆರೆದಿದ್ದವು. ವರ್ತುಲ‌ ರಸ್ತೆಯಲ್ಲಿ ಜನ ಎಂದಿನಂತೆ ವಾಯು ವಿಹಾರ ಮಾಡುತ್ತಿದ್ದರು. ಬಹುತೇಕ ಮಳಿಗೆಗಳು, ಹೋಟೆಲ್‌‌ಗಳು ಮುಚ್ಚಿವೆ. ಸಾರಿಗೆ ಸಂಸ್ಥೆ ಬಸ್ಸುಗಳು ರಸ್ತೆಗೆ ಇಳಿದಿಲ್ಲ. ಆಟೊ, ಕ್ಯಾಬ್ ಸಂಚಾರ ಸ್ಥಗಿತಗೊಂಡಿದೆ. ದೇವಾಲಯಗಳು ಮುಚ್ಚಿವೆ. ಬಹುತೇಕರು ಮನೆ ಬಿಟ್ಟು ಹೊರಬಂದಿಲ್ಲ. ಪ್ರಮುಖ ರಸ್ತೆಗಳೆಲ್ಲ ನಿರ್ಜನವಾಗಿವೆ. ಆದರೂ ಕೆಲ ವಾಹನ ಸವಾರರು ಲಾಕ್‌ಡೌನ್ ಇದ್ದರೂ ಲೆಕ್ಕಿಸದೆ ಸಂಚರಿಸುತ್ತಿರುವುದು ಕಂಡುಬಂತು.

ಆಸ್ಪತ್ರೆಗಳು, ಔಷಧ ಮಳಿಗೆಗಳು ತೆರೆದಿವೆ. ಎಂದಿನಂತೆ ಹಾಲು, ದಿನಪತ್ರಿಕೆಗಳು ಪೂರೈಕೆಯಾಗಿವೆ.
ಎಲ್ಲೂ ಪೊಲೀಸರು ಕಾಣಿಸುತ್ತಿಲ್ಲ. ಪೊಲೀಸರು ಗಸ್ತು ತಿರುಗಲು ಆರಂಭಿಸಿದರೆ ಅಲ್ಲಲ್ಲಿ ಜನ ಓಡಾಡುತ್ತಿರುವುದಕ್ಕೆ ಕಡಿವಾಣ ಬೀಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು