ಈಗಲ್ ಟನ್ ರೆಸಾರ್ಟಿನಿಂದ ತೆರಳಿದ ಬಳ್ಳಾರಿ ಶಾಸಕರು

7

ಈಗಲ್ ಟನ್ ರೆಸಾರ್ಟಿನಿಂದ ತೆರಳಿದ ಬಳ್ಳಾರಿ ಶಾಸಕರು

Published:
Updated:

ರಾಮನಗರ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.‌ ಶಿವಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಸಚಿವರು ಹಾಗೂ ಶಾಸಕರು ಶನಿವಾರ ಮಧ್ಯಾಹ್ನ ರೆಸಾರ್ಟಿನಿಂದ ವಿಧಾನಸೌಧಕ್ಕೆ ತೆರಳಿದರು. 

ಇದನ್ನೂ ಓದಿ: ‘ಆಪರೇಷನ್‌’ ಮಾಡಿಸೋಕೆ ಚೌಕಿದಾರ ಮೋದಿಗೆ ಇಷ್ಟು ಹಣ ಎಲ್ಲಿಂದ ಬರುತ್ತೆ?

‘ಬಳ್ಳಾರಿ‌ ಜಿಲ್ಲಾ ಮಿನರಲ್ ಫಂಡ್ ಬಳಕೆ ಕುರಿತು ವಿಧಾನಸೌಧದ ಕೊಠಡಿ‌ ಸಂಖ್ಯೆ 106ರಲ್ಲಿ ಸಭೆ ನಿಗದಿಯಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಅನುದಾನ ಬಳಕೆ ಬಗ್ಗೆ ಚರ್ಚಿಸಿ ಅಂತಿಮಗೊಳಿಸಬೇಕಿದೆ. ಹೀಗಾಗಿ ಮೂವರು ಸಚಿವರು ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು ಸಭೆಗೆ ತೆರಳುತ್ತಿದ್ದೇವೆ. ಸಭೆ ಬಳಿಕ ರೆಸಾರ್ಟ್ ಗೆ ವಾಪಸ್ ಆಗುತ್ತೇವೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.‌

ಸಚಿವರಾದ ಪರಮೇಶ್ವರ ನಾಯಕ್, ಈ. ತುಕರಾಂ, ಶಾಸಕ ಆನಂದ ಸಿಂಗ್ ಜೊತೆಗಿದ್ದರು.

Tags: 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !