ಸೋಮವಾರ, ಅಕ್ಟೋಬರ್ 21, 2019
23 °C

ಪ್ರಸ್ತಾಪಿತ ಆನವಟ್ಟಿ ತಾಲ್ಲೂಕಿಗೆ ಬನವಾಸಿ: ಸ್ಥಳೀಯರ ಪ್ರತಿಭಟನೆ

Published:
Updated:

ಶಿರಸಿ: ಕನ್ನಡದ‌ ಪ್ರಥಮ‌ ರಾಜಧಾನಿ ಬನವಾಸಿಯನ್ನು ಪಕ್ಕದ ಸೊರಬ ತಾಲ್ಲೂಕಿನ ಆನವಟ್ಟಿಗೆ ಸೇರಿಸುವ ಪ್ರಸ್ತಾವ ವಿರೋಧಿಸಿ, ಬನವಾಸಿಯಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಿದೆ. 

ಬನವಾಸಿ ಹೋಬಳಿಯ 74 ಹಳ್ಳಿಗಳ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಮಧುಕೇಶ್ವರ ದೇವಾಲಯದಿಂದ ಹೊರಟಿರುವ ಮೆರವಣಿಗೆ ಪ್ರಮುಖ‌ ಬೀದಿಗಳಲ್ಲಿ ಸಂಚರಿಸಲಿದೆ. 

ಬನವಾಸಿಯನ್ನು ರಕ್ಷಿಸಿ ಎಂದು ಘೋಷಣೆ ಕೂಗುತ್ತ ಸಾರ್ವಜನಿಕರು ಸಾಗುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)