ಬೆಳಗಾವಿಯಲ್ಲಿ ಬಂಡಾಯ ಸಾಹಿತ್ಯ ಕಾರ್ಯಾಗಾರ

7

ಬೆಳಗಾವಿಯಲ್ಲಿ ಬಂಡಾಯ ಸಾಹಿತ್ಯ ಕಾರ್ಯಾಗಾರ

Published:
Updated:

ಬೆಂಗಳೂರು: ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆಗೆ ನಲವತ್ತು ವರ್ಷಗಳು ತುಂಬಿದ ಪ್ರಯುಕ್ತ ಇದೇ ಮಾರ್ಚ್ 9 ಮತ್ತು 10ರಂದು ಬೆಳಗಾವಿಯಲ್ಲಿ ‘ಸೈದ್ಧಾಂತಿಕ ಅನುಸಂಧಾನ’ ಎಂಬ ರಾಜ್ಯಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಯುವಪೀಳಿಗೆಗೆ ದೇಶದಲ್ಲಿ ಪ್ರಚಲಿತವಿರುವ ವಿವಿಧ ಸೈದ್ಧಾಂತಿಕ ವಾದಗಳನ್ನು ಪರಿಚಯಿಸಿ, ಚರ್ಚಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಅಂಬೇಡ್ಕರ್ ವಾದ, ಗಾಂಧಿವಾದ, ಮಾರ್ಕ್ಸ್‌ವಾದ, ಲೋಹಿಯಾವಾದ, ಸ್ತ್ರೀವಾದ ಮತ್ತು ವಿಚಾರವಾದಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆಯಾಗಲಿವೆ. ಈ ವಾದಗಳ ಪರಸ್ಪರ ಅನುಸಂಧಾನದ ಅಗತ್ಯವನ್ನು ಈ ಕಾರ್ಯಾಗಾರದಲ್ಲಿ ಮನವರಿಕೆ ಮಾಡಿಕೊಡುವ ಆಶಯ ಕಾರ್ಯಾಗಾರದ್ದು.

ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಕಾರ್ಯಾಗಾರದ ನಿರ್ದೇಶಕರಾಗಿರುತ್ತಾರೆ. ಪ್ರತಿನಿಧಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಆಸಕ್ತರು ಡಾ.ವೈ.ಬಿ.ಹಿಮ್ಮಡಿ (92422 90846) ಅಥವಾ ಡಾ.ನಾಗರಾಜು (94496 11569) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !