ಬಂಡೀಪುರ: ಅಭಿಯಾನಕ್ಕೆ ವಿದೇಶಿಗರಿಂದಲೂ ಬೆಂಬಲ

7
ಬೆಂಗಳೂರಿನಲ್ಲಿ ಪ್ರತಿಭಟನೆ ನಾಳೆ

ಬಂಡೀಪುರ: ಅಭಿಯಾನಕ್ಕೆ ವಿದೇಶಿಗರಿಂದಲೂ ಬೆಂಬಲ

Published:
Updated:
Deccan Herald

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67 ಮತ್ತು 212ರಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬಾರದು. ಮೇಲ್ಸೇತುವೆ ನಿರ್ಮಿಸಬಾರದು ಎಂಬ ಅಭಿಯಾನಕ್ಕೆ ವಿದೇಶಿಗರಿಂದಲೂ ಬೆಂಬಲ ವ್ಯಕ್ತವಾಗಿದೆ.

‘ನೈಟ್‌ ಟ್ರಾಫಿಕ್‌ ಬೇಡ’ ಎಂಬ ಅಭಿಯಾನಕ್ಕೆ ಫೇಸ್‌ಬುಕ್‌, ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಅಮೆರಿಕ, ದಕ್ಷಿಣ ಆಫ್ರಿಕಾ, ಜರ್ಮನಿ, ನೈಜೀರಿಯಾದ ಪರಿಸರ ಪ್ರೇಮಿಗಳು ‘ಬಂಡೀಪುರ ಉಳಿಸಿ’ ಎಂಬ ಫಲಕವನ್ನು ಹಿಡಿದಿರುವ ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದಾರೆ.

ಬೆಂಗಳೂರಲ್ಲಿ ಪ್ರತಿಭಟನೆ: ತಿಂಗಳ ಅವಧಿಯಲ್ಲಿ ಮೈಸೂರು ಹಾಗೂ ಬಂಡೀಪುರದಲ್ಲಿ ಮೂರು ಪ್ರತಿಭಟನೆಗಳು ನಡೆದಿವೆ. ನ.10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪರಿಸರವಾದಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !