ಕೆಐಎ ಪ್ರಯಾಣಿಕರ ಸಂಖ್ಯೆ ಶೇ 32.9ರಷ್ಟು ಹೆಚ್ಚಳ

7

ಕೆಐಎ ಪ್ರಯಾಣಿಕರ ಸಂಖ್ಯೆ ಶೇ 32.9ರಷ್ಟು ಹೆಚ್ಚಳ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳುಗಳಲ್ಲಿ (ಏಪ್ರಿಲ್‌ನಿಂದ ಜೂನ್‌ವರೆಗೆ) ಒಟ್ಟಾರೆ 80.02 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಹಿಂದಿನ ವರ್ಷದ ಇದೇ ಅವಧಿಗೆ (2017–18) ಹೋಲಿಸಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 32.9ರಷ್ಟು ಏರಿಕೆಯಾಗಿದೆ.

‘ಈ ಅವಧಿಯಲ್ಲಿ 69.4 ಲಕ್ಷ ದೇಶಿ ಪ್ರಯಾಣಿಕರು, 10.8 ಲಕ್ಷ ವಿದೇಶಿ ಪ್ರಯಾಣಿಕರು ಕೆಐಎಯನ್ನು ಬಳಕೆ ಮಾಡಿದ್ದಾರೆ.  ಜೂನ್‌ 30ರಂದು ಒಂದೇ ದಿನದಲ್ಲಿ 98,869 ‌ಪ್ರಯಾಣಿಸಿದ್ದು, ವಿಮಾನ ನಿಲ್ದಾಣ ಆರಂಭವಾದ ಇಲ್ಲಿಯವರೆಗೆ ಒಂದೇ ದಿನದಲ್ಲಿ ಅತ್ಯಧಿಕ ಪ್ರಯಾಣಿಕರನ್ನು ಕಂಡ ಹೆಗ್ಗಳಿಕೆಗೆ ಆ ದಿನ ಪಾತ್ರವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲದ ಮೊದಲ ಮೂರು ತಿಂಗಳುಗಳಲ್ಲಿ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಿದ ವಿಮಾನಗಳ ಸಂಖ್ಯೆಯಲ್ಲೂ 32.9ರಷ್ಟು ಹೆಚ್ಚಳವಾಗಿದೆ. ಈ ಬಾರಿ 58,054 ವಿಮಾನಗಳು ಹಾರಾಟ ಮಾಡಿವೆ. ಹಿಂದಿನ ವರ್ಷದಲ್ಲಿ 43,673 ಹಾರಾಟ ನಡೆಸಿದ್ದವು. 2018ರ ಮೇ 4ರಂದು 685 ವಿಮಾನಗಳು ಹಾರಾಟ ಮಾಡಿದ್ದು, ಅದೂ ಕೆಐಎನ ದಾಖಲೆಯಾಗಿದೆ. ನಿಲ್ದಾಣಕ್ಕೆ ನಿತ್ಯ ಬಂದುಹೋಗುವ ವಿಮಾನಗಳ ಸಂಖ್ಯೆ ಸರಾಸರಿ 638ಕ್ಕೆ ಹೆಚ್ಚಿದೆ.

ಮೂರು ತಿಂಗಳಲ್ಲಿ 97,486 ಮೆಟ್ರಿಕ್‌ ಟನ್‌ಗಳಷ್ಟು ಸರಕು ಸಾಗಣೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ (83,584 ಮೆಟ್ರಿಕ್‌ ಟನ್‌) ಈ ಬಾರಿ ಶೇ 16.6ರಷ್ಟು ಹೆಚ್ಚಳ ಕಂಡಿದೆ. ಜೂನ್‌ ತಿಂಗಳಲ್ಲಿಯೇ ಅತಿ ಹೆಚ್ಚು (34,398 ಮೆಟ್ರಿಕ್‌ ಟನ್) ಸರಕನ್ನು ಸಾಗಣೆ ಮಾಡಲಾಗಿದೆ.

ಏಪ್ರಿಲ್‌ನಿಂದ ಜೂನ್‌ ಅವಧಿಯಲ್ಲಿ 33 ಹೊಸ ವಿಮಾನಗಳು ಕೆಐಎಯಿಂದ ಕಾರ್ಯಾಚರಣೆ ಆರಂಭಿಸಿವೆ. ಅವುಗಳಲ್ಲಿ ಎಂಟು ದೇಶೀಯ ಮತ್ತು 25 ಅಂತರರಾಷ್ಟ್ರೀಯ ವಿಮಾನಗಳು. 67 ಸ್ಥಳಗಳಿಗೆ (45 ದೇಶೀಯ ಮತ್ತು 22 ಅಂತರರಾಷ್ಟ್ರೀಯ) ಅವುಗಳು ಸಂಪರ್ಕ ಕಲ್ಪಿಸಿವೆ.

‘ಗಲ್ಫ್‌ ಏರ್‌’ ಸಂಸ್ಥೆ ಮೇ 1ರಿಂದ ಕೆಐಎಯಿಂದ ಕಾರ್ಯಾಚರಣೆ ಆರಂಭಿಸಿದ್ದು, ಬೆಂಗಳೂರಿನಿಂದ ಬಹ್ರೇನ್‌ಗೆ ನೇರ ಸಂಪರ್ಕ ಕಲ್ಪಿಸುತ್ತಿದೆ. ಈ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುವ ವಿಮಾನಗಳಲ್ಲಿ ಶೇ 85.6ರಷ್ಟು ಸಮಯ ಪರಿಪಾಲನೆ ಮಾಡಿವೆ ಎಂದು ವರದಿ ಬಿಡುಗಡೆ ಮಾಡಿರುವ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ತಿಳಿಸಿದರು.

ಪ್ರಯಾಣಿಕರಿಗೆ ನೀಡುತ್ತಿರುವ ಸೇವೆಗಳನ್ನು ವಿಸ್ತರಿಸಲು ಹೊಸ ರೀತಿಯ ಡಿಜಿಟಲ್ ಪರಿಹಾರಗಳನ್ನು ಪರಿಚಯಿಸಲಾಗುತ್ತದೆ’ ಎಂದು ಅವರು ಹೇಳಿದರು.

ಯಾವ ನಗರಗಳಿಗೆ ಹೆಚ್ಚಿನ ಪ್ರಯಾಣಿಕರು?

ಸ್ಥಳ,ಪ್ರಯಾಣಿಕ ಸಂಖ್ಯೆ

ದೆಹಲಿ (11,15,145)

ಮುಂಬೈ (8,75,474)

ಕೋಲ್ಕತ್ತ (4,73,089)

ಅಂಕಿ ಅಂಶ

* 80.02 ಲಕ್ಷ

ಕೆಐಎಯಿಂದ ಪ್ರಯಾಣಿಸಿದವವರ ಸಂಖ್ಯೆ (ಏಪ್ರಿಲ್‌ನಿಂದ ಜೂನ್‌ವರೆಗೆ)

* 58,054

ಹಾರಾಟ ಮಾಡಿರುವ ವಿಮಾನಗಳು

* 85.6%

ಸಮಯ ಪರಿಪಾಲನೆ ಮಾಡಿದ ವಿಮಾನಗಳ ಪ್ರಮಾಣ

* 685 (ಮೇ 4 ರಂದು)

ಒಂದು ದಿನದಲ್ಲಿ ಅತಿ ಹೆಚ್ಚು ವಿಮಾನಗಳ ಹಾರಾಟ

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !