ಮಧ್ಯಸ್ಥಿಕೆ ಕೇಂದ್ರ ಭಾನುವಾರವೂ ಕಾರ್ಯ ನಿರ್ವಹಣೆ

7

ಮಧ್ಯಸ್ಥಿಕೆ ಕೇಂದ್ರ ಭಾನುವಾರವೂ ಕಾರ್ಯ ನಿರ್ವಹಣೆ

Published:
Updated:

ಬೆಂಗಳೂರು:  ‘ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರ ಭಾನುವಾರವೂ ಕಾರ್ಯ ನಿರ್ವಹಿಸಲಿದೆ’ ಎಂದು ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಪ್ರಕಟಿಸಿದರು.

ಮಧ್ಯಸ್ಥಿಕೆ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ‘ಬರುವ ಸೆಪ್ಟೆಂಬರ್‌ 2ರಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ. ಮೊದಲಿಗೆ ಪ್ರತಿ ಭಾನುವಾರ ಅರ್ಧ ದಿನ ಕಾರ್ಯ ನಿರ್ವಹಿಸಲಾಗುವುದು. ಇದರ ಯಶಸ್ಸನ್ನು ನೋಡಿಕೊಂಡು ಭವಿಷ್ಯದಲ್ಲಿ ಪೂರ್ಣದಿನದ ಕಾರ್ಯ ನಿರ್ವಹಣೆಗೆ ಸಜ್ಜುಗೊಳಿಸಲಾಗುವುದು’ ಎಂದರು.

ಕೇಂದ್ರದ ಅಧ್ಯಕ್ಷ ಹೈಕೋರ್ಟ್ ನ್ಯಾಯಮೂರ್ತಿ ರವಿ ಮಳಿಮಠ, ನಿರ್ದೇಶಕರುಗಳಾದ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ಬಿ.ವೀರಪ್ಪ ಉಪಸ್ಥಿತರಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !