ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ

ಶನಿವಾರ, ಮಾರ್ಚ್ 23, 2019
31 °C

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ

Published:
Updated:
Prajavani

ಬಿಜೆಪಿ ಹಿಡಿತದಲ್ಲಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಲಗ್ಗೆ ಹಾಕಲು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸಿವೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ನಡೆದ ಎರಡೂ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸಿತ್ತು. ಇದಕ್ಕೂ ಮೊದಲು ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಈ ಕ್ಷೇತ್ರದಲ್ಲಿ 2004 ರಲ್ಲಿ ಬಿಜೆಪಿಯ ಸಾಂಗ್ಲಿಯಾನ ಖಾತೆ ತೆರೆದರು.

2009 ರಲ್ಲಿ ಡಿ.ಬಿ.ಚಂದ್ರೇಗೌಡ, 2014 ಡಿ.ವಿ.ಸದಾನಂದಗೌಡ ಗೆಲುವು ಸಾಧಿಸಿದ್ದರು.  ಒಕ್ಕಲಿಗರ ಮತದಾರರ ಸಂಖ್ಯೆ ಅಧಿಕವಾಗಿರುವ ಕಾರಣ ಮತ್ತು ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಏರ್ಪಟ್ಟರೆ ಎಚ್‌.ಡಿ.ದೇವೇಗೌಡ ಈ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. 

––––––––––

ಆಕಾಂಕ್ಷಿಗಳು

ಬಿಜೆಪಿ– ಡಿ.ವಿ.ಸದಾನಂದಗೌಡ, ಡಾ.ಚಂದ್ರಶೇಖರ್

ಕಾಂಗ್ರೆಸ್‌– ರಕ್ಷ್‌ ರಾಮಯ್ಯ, ಕೃಷ್ಣ ಬೈರೇಗೌಡ, ಜಿ.ಸಿ.ಚಂದ್ರಶೇಖರ್

ಜೆಡಿಎಸ್‌– ಎಚ್‌.ಡಿ.ದೇವೇಗೌಡ

ಮತದಾರರ ಸಂಖ್ಯೆ: 24,01,472

ವಿಧಾನಸಭಾ ಕ್ಷೇತ್ರ ಬಲಾಬಲ

ಒಟ್ಟು 8

ಕಾಂಗ್ರೆಸ್‌ 5 ಯಶವಂತಪುರ, ಕೆ.ಆರ್.ಪುರ, ಬ್ಯಾಟರಾಯನಪುರ, ಯಶವಂತಪುರ, ಹೆಬ್ಬಾಳ, 

ಬಿಜೆಪಿ 1 ಮಲ್ಲೇಶ್ವರ

ಜೆಡಿಎಸ್‌ 2 ಮಹಾಲಕ್ಷ್ಮಿ ಲೇಔಟ್, ಪುಲಿಕೇಶಿ ನಗರ

ಹಿಂದಿನ ಚುನಾವಣೆಗಳ ಲೆಕ್ಕಾಚಾರ 

2014

ವಿಜೇತರು: ಡಿ.ವಿ.ಸದಾನಂದಗೌಡ , ಗೆಲುವಿನ ಅಂತರ: 2,29,764

ಡಿ.ವಿ.ಸದಾನಂದಗೌಡ ;ಬಿಜೆಪಿ; 52.91%
ಸಿ.ನಾರಾಯಣಸ್ವಾಮಿ ;ಕಾಂಗ್ರೆಸ್‌; 35.99 %

ಅಬ್ದುಲ್‌ ಅಜೀಂ; ಜೆಡಿಎಸ್; 6.83%

ಇತರೆ; 4.27%
–––––

2009

ವಿಜೇತರು:ಡಿ.ಬಿ.ಚಂದ್ರೇಗೌಡ, ಗೆಲುವಿನ ಅಂತರ: 59,665

ಡಿ.ಬಿ.ಚಂದ್ರೇಗೌಡ;ಬಿಜೆಪಿ;45.22%

ಸಿ.ಕೆ.ಜಾಫರ್‌ ಷರೀಫ್;ಕಾಂಗ್ರೆಸ್‌;39.26%

ಆರ್‌.ಸುರೇಂದ್ರಬಾಬು; ಜೆಡಿಎಸ್‌ 11.08%

ಇತರೆ;4.44%

 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !