ನಾಳೆ, ನಾಡಿದ್ದು ಬ್ಯಾಂಕ್‌ ಮುಷ್ಕರ

7

ನಾಳೆ, ನಾಡಿದ್ದು ಬ್ಯಾಂಕ್‌ ಮುಷ್ಕರ

Published:
Updated:

ನವದೆಹಲಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಇದೇ 8 ಮತ್ತು 9ರಂದು ನಡೆಯಲಿರುವ ಕಾರ್ಮಿಕರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕೆಲವು ಬ್ಯಾಂಕ್‌ ಒಕ್ಕೂಟಗಳು ಸಹ ಬೆಂಬಲ ಸೂಚಿಸಿವೆ.

ಅಖಿಲ ಭಾರತ ಬ್ಯಾಂಕ್‌ ಸಿಬ್ಬಂದಿಗಳ ಒಕ್ಕೂಟ (ಎಐಬಿಇಎ) ಮತ್ತು ಬ್ಯಾಂಕ್‌ ಸಿಬ್ಬಂದಿಗಳ ಸಂಘಟನೆ (ಬಿಇಎಫ್‌ಐ) ಮುಷ್ಕರ ನಡೆಸಲಿವೆ. ಇದರಿಂದ ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಐಡಿಬಿಐ ಬ್ಯಾಂಕ್‌ ಷೇರುಪೇಟೆಗೆ ಮಾಹಿತಿ ನೀಡಿದೆ.

ನಮ್ಮ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸಿದರೆ ಮಾತ್ರವೇ ಬ್ಯಾಂಕಿಂಗ್‌ ವಹಿವಾಟಿಗೆ ಅಡ್ಡಿಯಾಗಲಿದೆ ಎಂದು ಕರೂರ್‌ ವೈಶ್ಯ ಬ್ಯಾಂಕ್‌ ತಿಳಿಸಿದೆ.

ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್‌, ಸಿಐಟಿಯು ಒಳಗೊಂಡು ಒಟ್ಟು 10 ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಮುಷ್ಕರ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !