ರಾಜನ್, ರುಕ್ಕೋಜಿಗೆ ಬರಗೂರು ಪ್ರಶಸ್ತಿ

7

ರಾಜನ್, ರುಕ್ಕೋಜಿಗೆ ಬರಗೂರು ಪ್ರಶಸ್ತಿ

Published:
Updated:
Prajavani

ಚಿತ್ರದುರ್ಗ: ಸಂಗೀತ ನಿರ್ದೇಶಕ ರಾಜನ್ ಹಾಗೂ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ಯ ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ಅವರನ್ನು ‘ಬರಗೂರು ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಡಾ.ಬರಗೂರು ಪ್ರತಿಷ್ಠಾನ ಪ್ರದಾನ ಮಾಡುವ ಈ ಪ್ರಶಸ್ತಿ ₹ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

ಬರಗೂರು ರಾಮಚಂದ್ರಪ್ಪ ಅವರ ಪತ್ನಿ ರಾಜಲಕ್ಷ್ಮಿ ಅವರ ಹೆಸರಿನಲ್ಲಿ ಪ್ರದಾನ ಮಾಡುವ ಪ್ರಶಸ್ತಿಗೆ ಡಾ.ಕೆ.ಎಸ್. ಕುಮಾರಸ್ವಾಮಿ, ಚೀಮನಹಳ್ಳಿ ರಮೇಶ್ ಬಾಬು ಹಾಗೂ ಶ್ರೀಧರ್ ಬನವಾಸಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ₹ 10 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

ಜ.20ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !