ಬುಧವಾರ, ನವೆಂಬರ್ 20, 2019
21 °C
ನೆರೆ ಪರಿಹಾರಕ್ಕೆ ನೆರವು; ಕೇಂದ್ರ ಸರ್ಕಾರಕ್ಕೆ ಬಿಜೆಪಿ ಶಾಸಕ

ನಮ್ಮ ತಾಳ್ಮೆ ಪರೀಕ್ಷಿಸದಿರಿ: ಬಸನಗೌಡ ಪಾಟೀಲ ಯತ್ನಾಳ

Published:
Updated:
Prajavani

ತುಮಕೂರು: ‘ರಾಜ್ಯದ ಪ್ರಕೃತಿ ವಿಕೋಪಕ್ಕೆ ವಿಶೇಷ ನೆರವು ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಪರಿಹಾರ ಕೇಳುವುದು ನಮ್ಮ ಹಕ್ಕು. ನೆರವಿಗೆ ಬರದಿದ್ದರೆ ಧ್ವನಿ ಎತ್ತಲಾಗುವುದು. ನಮ್ಮ ತಾಳ್ಮೆ ಪರೀಕ್ಷಿಸಬೇಡಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಆಗಿದೆ. ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬರಲೇಬೇಕು ಎಂಬುದು ನಮ್ಮ ಆಗ್ರಹ. ನಮ್ಮ ನೆರವಿಗೆ ಬರುವ ವಿಶ್ವಾಸ ಇದೆ. ಕಾದು ನೋಡುತ್ತೇವೆ. ಅನುದಾನ ಬರದಿದ್ದರೆ ಧ್ವನಿ ಎತ್ತುತ್ತೇವೆ’ ಎಂದರು.

ನೆರೆ ಪರಿಹಾರದ ವಿಚಾರದಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಾಶ್ವತ ಯೋಜನೆ ಕೈಗೊಳ್ಳುವ ವಿಶ್ವಾಸ ಇದೆ. ಈಗಾಗಲೇ ತುರ್ತು ಪರಿಹಾರ ಕಾಮಗಾರಿಗಳನ್ನು ಮುಖ್ಯಮಂತ್ರಿ ಅವರು ಕೈಗೊಂಡಿದ್ದಾರೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)