ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ‌ಇದ್ದಾಗ‌ ಸರಿಯಾಗಿ ನಡೆಸಿಕೊಂಡಿಲ್ಲ: ಹೊರಟ್ಟಿ ಅಸಮಾಧಾನ

ಎಚ್‌ಡಿಕೆಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ನನಗಿಲ್ಲ
Last Updated 23 ಅಕ್ಟೋಬರ್ 2019, 2:39 IST
ಅಕ್ಷರ ಗಾತ್ರ

ಬೆಂಗಳೂರು:‘ಜೆಡಿಎಸ್‌ ನಾಯಕರು ಸರ್ಕಾರ ‌ಇದ್ದಾಗ‌ ನಮ್ಮನ್ನುಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನ ಇದೆ, ಆದರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಮಾಡುವುದೂ ಇಲ್ಲ, ಏನಾದರೂ ಅಸಮಾಧಾನ ಇದ್ದರೆ ಬಹಿರಂಗವಾಗಿಯೇ ಹೇಳುತ್ತೇವೆ’ ಎಂದು ಪಕ್ಷದ ಹಿರಿಯ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಜೆಡಿಎಸ್‌ ನಾಯಕತ್ವ ವಿರುದ್ಧ ತಿರುಗಿ ಬಿದ್ದಿರುವ ಪಕ್ಷದ ವಿಧಾನ ಪರಿಷತ್ ಸದಸ್ಯರು ಮಂಗಳವಾರ ಇಲ್ಲಿ ನಡೆಸಲು ಉದ್ದೇಶಿಸಿದ್ದ ಸಭೆ ಕೆಲವು ಸದಸ್ಯರ ಅನುಪಸ್ಥಿತಿಯ ಕಾರಣ ಮುಂದಕ್ಕೆ ಹೋದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ‘ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಅವರಿಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ನನಗಿಲ್ಲ. ಅವರುದೊಡ್ಡವರು, ಅವರ ಬಗ್ಗೆ ಮಾತಾನಾಡುವುದಕ್ಕೆ ಆಗುವುದಿಲ್ಲ.ದೇವೇಗೌಡರು ಕೂತ್ಕೊಂಡು ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ’ ಎಂದರು.

‘ವಿಧಾನ ಪರಿಷತ್‌ ಸಭಾಪತಿಸ್ಥಾನ‌ ಹೋದಾಗ ನನ್ನ ಜೊತೆ ಮಾತನಾಡಿಲ್ಲ.ಆ‌ ನೋವು ನನಗಿದೆ, ಆದರೆ ಅಸಮಾಧಾನ ‌ಇಲ್ಲ.ಸಭಾಪತಿ ಸ್ಥಾನ ತಪ್ಪಿದಾಗ ಸಮಾಧಾನ ಹೇಳಿದ್ದರೆ ಸರಿಯಾಗುತ್ತಿತ್ತು. ನಾನು ಕಣ್ಣೀರು ಹಾಕುವ ಸ್ಥಿತಿ ಉಂಟಾಗಿತ್ತು.ಆಗ ಯಾರೂ ಆ ಬಗ್ಗೆ ಮಾತನಾಡಿಲ್ಲ. ಆದರೆ ದೇವೇಗೌಡರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ’ ಎಂದು ಹೇಳಿದರು.

‘ನಾವು ಎಲ್ಲರೂ ಸೇರಿಮಾತನಾಡುವುದು ತಪ್ಪಾ? ಈಕ್ಷಣದವರೆಗೂ ಪಕ್ಷ ಬಿಡುವ ಯೋಚನೆ ಮಾಡಿಲ್ಲ.ಹೋಗುವುದಾದರೆ ಮಾಧ್ಯಮಗಳಿಗೆ,ದೇವೇಗೌಡರಿಗೆ ಹೇಳಿ ಹೋಗುತ್ತೇನೆ, 1983ರಿಂದಜನತಾ ಪರಿವಾರದಲ್ಲೇ ಇದ್ದೇನೆ. ತರಾತುರಿಯಲ್ಲಿ ಪಕ್ಷ ಬಿಡುವ ಅನಿವಾರ್ಯತೆ ಇಲ್ಲ. ಪಕ್ಷದ ವಿಧಾನಸಭಾ ಸದಸ್ಯರಾರೂನನ್ನ ಜೊತೆ ಮಾತನಾಡಿಲ್ಲ, ನಾನು ಅಷ್ಟು ದೊಡ್ಡವನಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT