ಅಸಮಾಧಾನ ನಿಜ; ‘ಆಪರೇಷನ್’ ಸುಳ್ಳು– ಬಿ.ಸಿ. ಪಾಟೀಲ

7

ಅಸಮಾಧಾನ ನಿಜ; ‘ಆಪರೇಷನ್’ ಸುಳ್ಳು– ಬಿ.ಸಿ. ಪಾಟೀಲ

Published:
Updated:
Prajavani

ಸಾತೇನಹಳ್ಳಿ (ಹಾವೇರಿ ಜಿಲ್ಲೆ): ‘ವೈಯಕ್ತಿಕ ಹಾಗೂ ಕ್ಷೇತ್ರಕ್ಕೆ ಆದ ಅನ್ಯಾಯದಿಂದ ಅಸಮಾಧಾನ ಆಗಿತ್ತು. ಹೀಗಾಗಿ, ಅಧಿವೇಶನದಲ್ಲಿ ಪಾಲ್ಗೊಂಡಿರಲಿಲ್ಲ. ಇದು ಬಿಟ್ಟರೆ ಯಾವುದೇ ‘ಆಪರೇಷನ್ನೂ’ ಇಲ್ಲ, ಮುಂಬೈಗೂ ಹೋಗಿರಲಿಲ್ಲ’ ಎಂದು ಶಾಸಕ ಬಿ.ಸಿ.ಪಾಟೀಲ ಹೇಳಿದರು.

‘ನಾನು ಎಲ್ಲಿಗೂ ಹೋಗಿಲ್ಲ. ಅಸಮಾಧಾನಗೊಂಡಿದ್ದ ಕಾರಣ ಮನೆಯಲ್ಲಿಯೇ ಇದ್ದೆ. ಸೋಮವಾರದಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ. ಈ ಹಿಂದೆ, ‘ಆಪರೇಷನ್ ಕಮಲ’ದ ಪ್ರಯತ್ನಗಳ ಬಗ್ಗೆ ಬಹಿರಂಗಗೊಳಿಸಿದವನು ನಾನೇ. ಆದರೆ, ಯಾರೋ ಏನೋ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಹಿರೇಕೆರೂರ ತಾಲ್ಲೂಕಿನ ಸಾತೇನಹಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

‘ಕ್ಷೇತ್ರದ ಕೆಲವು ಪ್ರಮುಖ ಯೋಜನೆಗಳ ಬಗ್ಗೆ ಬೇಡಿಕೆ ಇಟ್ಟಿದ್ದೆ. ಪರಿಗಣಿಸದ ಕಾರಣ ಬೇಸರ ಆಗಿದೆ. ಆದರೆ, ಈ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ಮಾಡಿ ಮಾತನಾಡಿದ್ದು, ಈಡೇರಿಸುವ ಭರವಸೆ ನೀಡಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗಿ ಚರ್ಚಿಸಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !