ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ₹1 ಲಕ್ಷ ದಂಡ

Last Updated 5 ನವೆಂಬರ್ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ನಿಯಮಬಾಹಿರವಾಗಿ ಹಿರಿಯ ನಾಗಕರೊಬ್ಬರ ಜಮೀನು ಸ್ವಾಧೀನ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್‌ ₹ 1 ಲಕ್ಷ ದಂಡ ವಿಧಿಸಿದೆ.

ಈ ಕುರಿತಂತೆ ಬಿಡಿಎ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶದಂತೆ ಪಿ.ಜಿ.ಬೆಳ್ಳಿಯಪ್ಪ ಅವರಿಗೆ 31,613 ಚದರ ಅಡಿ ಅಭಿವೃದ್ಧಿ ಹೊಂದಿದ ಜಾಗ ಹಾಗೂ ₹ 1 ಲಕ್ಷ ದಂಡ ನೀಡಬೇಕು’ ಎಂದು ನಿರ್ದೇಶಿಸಿದೆ.

ಅಸಮಾಧಾನ: ‘ಜಮೀನಿನ ಮಾಲೀಕರಿಗೆ ಪರ್ಯಾಯ ಜಮೀನು ಅಥವಾ ಪರಿಹಾರ ನೀಡದ್ದನ್ನು ಒಪ್ಪಲಾಗದು.ಬಿಡಿಎ ಇಂತಹ ಹಲವು ಪ್ರಕರಣಗಳಲ್ಲಿ ಇದೇ ರೀತಿ ನಡೆದುಕೊಂಡಿರುವುದು ಗಮನಕ್ಕೆ ಬಂದಿದೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪ್ರಕರಣವೇನು?: ಬನಶಂಕರಿ ಬಡಾವಣೆಯ 6ನೇ ಹಂತದ ಅಭಿವೃದ್ಧಿಗೆ ಬಿಡಿಎ 2002ರಲ್ಲಿ ಅರ್ಜಿದಾರರ 63,162 ಚದರ ಅಡಿ ಜಮೀನು ವಶಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರವಾಗಿ ವಶಪಡಿಸಿಕೊಂಡ ಜಮೀನಿನಲ್ಲಿ ಅರ್ಧದಷ್ಟನ್ನು ಬಡಾವಣೆ ಅಭಿವೃದ್ಧಿಪಡಿಸಿದ ನಂತರ ನೀಡುವುದಾಗಿ ನಿರ್ಣಯ ಸ್ವೀಕರಿಸಿತ್ತು.

ಆದರೆ, ಸೂಕ್ತ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿ ಬೆಳ್ಳಿಯಪ್ಪ ಹೈಕೋರ್ಟ್‌ ಮೊರೆ ಹೋಗಿದ್ದರು.

ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ 2019ರ ಮಾರ್ಚ್‌ ಮೊದಲ ವಾರದಲ್ಲಿ, ‘ಬಿಡಿಎ, ಅರ್ಜಿದಾರರಿಗೆ 31,613 ಚ. ಅಡಿ ಜಮೀನನ್ನು ಅದೇ ಬಡಾವಣೆಯಲ್ಲಿ ಇಲ್ಲವೇ ಅಭಿವೃದ್ಧಿ ಹೊಂದಿದ ಹತ್ತಿರದ ಬಡಾವಣೆಯಲ್ಲಿ ಈ ಅಳತೆಯ ಜಮೀನಿನ ಮಾರುಕಟ್ಟೆ ದರಕ್ಕೆ ಸಮವಾಗಿ ಪರ್ಯಾಯ ರೂಪದಲ್ಲಿ ನೀಡಬೇಕು’ ಎಂದು ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT