ಶುಕ್ರವಾರ, ಆಗಸ್ಟ್ 23, 2019
22 °C

ಪ್ರವಾಹ: ಪರಿಹಾರ ಸಾಮಗ್ರಿ ಉಚಿತ ಸಾಗಣೆಗೆ ಕೆಎಸ್‌ಆರ್‌ಟಿಸಿ ಸೂಚನೆ

Published:
Updated:

ಬೆಂಗಳೂರು: ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯದಲ್ಲಿ ಕೈಜೋಡಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಎಸ್‌ಆರ್‌ಟಿಸಿ) ಮುಂದಾಗಿದೆ.

ನಿಗಮದ ದೈನಂದಿನ ಸಾರಿಗೆಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಲು ಅನುವು ಮಾಡಿಕೊಡುವಂತೆ ಎಲ್ಲ ಘಟಕಗಳಿಗೆ ಸೂಚಿಸಲಾಗಿದೆ. ತುರ್ತು ಕಾರ್ಯಗಳಿಗಾಗಿ 2 ವಾಹನ, ಇಬ್ಬರು ನಿರ್ವಾಹಕರು ಮತ್ತು ಚಾಲಕರನ್ನು ನಿಯೋಜಿಸುವಂತೆ ನಿರ್ದೇಶಿಸಲಾಗಿದೆ.

ಜಿಲ್ಲಾಡಳಿತದಿಂದ ಕೋರಿಕೆ ಬಂದಲ್ಲಿ ತುರ್ತಾಗಿ ವಾಹನ ಕಳುಹಿಸುವುದು, ಮಾರ್ಗ ಮಧ್ಯೆ ಸಿಲುಕಿಕೊಂಡ ಬಸ್‌ಗಳಿಂದ ಪ್ರಯಾಣಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯುವುದು, ಮುಂಗಡ ಕಾಯ್ದಿರಿಸಿದ ಪ್ರಯಾಣಿಕರು ಅನಿವಾರ್ಯ ಕಾರಣಗಳಿಂದ ಕೊನೇಕ್ಷಣದಲ್ಲಿ ಪ್ರಯಾಣ ರದ್ದು ಮಾಡಬೇಕಾಗಿ ಬಂದಲ್ಲಿ ಪೂರ್ತಿ ಮೊತ್ತ ಮರಳಿಸಲು ಕ್ರಮ ಕೈಗೊಳ್ಳುವಂತೆಯೂ ಘಟಕಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಕೆಎಎಸ್‌ಆರ್‌ಟಿಸಿ ಸೂಚಿಸಿದೆ.

Post Comments (+)