ಬೆಂಗಳೂರು– ಹುಬ್ಬಳ್ಳಿ ರೈಲ್ವೆ ದ್ವಿಪಥ ಕಾಮಗಾರಿ 2 ವರ್ಷದಲ್ಲಿ ಪೂರ್ಣ

7

ಬೆಂಗಳೂರು– ಹುಬ್ಬಳ್ಳಿ ರೈಲ್ವೆ ದ್ವಿಪಥ ಕಾಮಗಾರಿ 2 ವರ್ಷದಲ್ಲಿ ಪೂರ್ಣ

Published:
Updated:

ಹುಬ್ಬಳ್ಳಿ: ಬೆಂಗಳೂರು– ಹುಬ್ಬಳ್ಳಿ ರೈಲ್ವೆ ಮಾರ್ಗವನ್ನು ದ್ವಿಪಥಗೊಳಿಸುವ ಕಾಮಗಾರಿ 2020ಕ್ಕೆ ಪೂರ್ಣಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ಹೇಳಿದರು.

ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಈ ಕಾಮಗಾರಿಗೆ ಅಗತ್ಯ ಇರುವ ಸಾಧನ ಸಲಕರಣೆಗಳ ಲಭ್ಯತೆಯ ಆಧಾರದ ಮೇಲೆ ಅದು ತೀರ್ಮಾನವಾಗಲಿದೆ. ಉದ್ದನೆಯ ಹಳಿಗಳು ಸಿಕ್ಕರೆ ನೇರವಾಗಿ ಯೋಡಣೆ ಮಾಡಬಹುದು. ಇಲ್ಲವಾದರೆ ಸಣ್ಣ ಹಳಿಗಳನ್ನು ವೆಲ್ಡಿಂಗ್ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಹುಬ್ಬಳ್ಳಿ– ವಾಸ್ಕೋ ಮಾರ್ಗದ ಕಾಮಗಾರಿಯೂ ಪ್ರಗತಿಯಲ್ಲಿದ್ದು, ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದೆ. ಮುನಿರಾಬಾದ್– ಮೆಹಬೂಬ್‌ನಗರ ಮಾರ್ಗ ನಿರ್ಮಾಣಕ್ಕೆ ಒಟ್ಟು 1,100 ಎಕೆಯ ಭೂಮಿಯ ಅಗತ್ಯವಿದ್ದು, 300 ಎಕರೆ ಭೂಸ್ವಾಧೀನವಾಗಿದೆ. ಉಳಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನೀಡುವಂತೆ ಪತ್ರ ಬರೆಯಲಾಗಿದೆ. ಇದು ಸಹ ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ವಿಶ್ವಾಸ ಇದೆ. ಸರಕು ಸಾಗಣೆ ರೈಲುಗಳು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಹೋಗುವುದನ್ನು ತಪ್ಪಿಸಲು ರೈಲು ಬೈಪಾಸ್ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ವರ್ಷ ಅದು ಮುಗಿಯಲಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !