ಶನಿವಾರ, ಆಗಸ್ಟ್ 24, 2019
21 °C

ಸೇನಾ ಹೆಲಿಕಾಪ್ಟರ್ ಕಾರ್ಯಾಚರಣೆ; ನಡುಗಡ್ಡೆಯಲ್ಲಿದ್ದ 44 ಸಂತ್ರಸ್ತರ ರಕ್ಷಣೆ

Published:
Updated:

ಬೆಳಗಾವಿ: ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧೆಡೆ ಪ್ರವಾಹದಿಂದಾಗಿ ನಡುಗಡ್ಡೆಯಾಗಿದ್ದ ಪ್ರದೇಶಗಳಲ್ಲಿ ಸಿಲುಕಿದ್ದ 44 ಮಂದಿಯನ್ನು ಸೇನೆಯ ಮೂರು ಹೆಲಿಕಾಪ್ಟರಗಳನ್ನು ಬಳಸಿ ರಕ್ಷಣೆ ಮಾಡಲಾಯಿತು. 

ಗೋಕಾಕ ತಾಲೂಕಿನ ಉದಿಗಟ್ಟಿಯಲ್ಲಿದ್ದ 7 ಜನರನ್ನು ರಕ್ಷಿಸಲಾಗಿದೆ. ವಿವಿಧೆಡೆ 320 ಆಹಾರದ ಪೊಟ್ಟಣಗಳನ್ನು ಹಾಕಲಾಗಿದೆ. ರಾಮದುರ್ಗ ತಾಲ್ಲೂಕಿನ ಹಾಲೊಳ್ಳಿಯಲ್ಲಿ 18, ಮುಧೋಳದ ಗಿರ್ದಾಳದಿಂ ಒಬ್ಬರು, ರೋಣಿಯಲ್ಲಿದ್ದ 6 ಜನರನ್ನು ರಕ್ಷಿಸಲಾಗಿದೆ.

ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಹಾಲೊಳ್ಳಿಯ ಮೂವರು ಹಾಗೂ ರೂಗಿ ಮತ್ತು ಚನ್ನಾಳದ 10 ಜನರನ್ನು ರಕ್ಷಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Post Comments (+)