ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

794 ಅಬಕಾರಿ ದಾಳಿ: ₹1.10 ಕೋಟಿ ಮೌಲ್ಯದ ವಸ್ತು ಜಪ್ತಿ

Last Updated 27 ಏಪ್ರಿಲ್ 2020, 10:28 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ಇಲಾಖೆಯಿಂದ 794 ಅಬಕಾರಿ ದಾಳಿಗಳನ್ನು ನಡೆಸಿ, ಮದ್ಯ ಮತ್ತು ವಾಹನ ಸೇರಿದಂತೆ ₹ 1.10 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅಬಕಾರಿ ಉಪ ಆಯುಕ್ತ ಬಸವರಾಜ ತಿಳಿಸಿದ್ದಾರೆ.

‘ಜಿಲ್ಲೆಯಾದ್ಯಂತ ಕಳ್ಳಬಟ್ಟಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ, ಅಕ್ರಮ ಚಟುವಟಿಕೆಗಳು ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಲಾಗಿದೆ. ಮಾರ್ಚ್‌ 24ರಿಂದ ಇಲ್ಲಿಯವರೆಗೆ ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ ನಡೆಸಲಾಗಿದೆ. ಹಗಲು- ರಾತ್ರಿ ಗಸ್ತು ವ್ಯವಸ್ಥೆ ಮಾಡಲಾಗಿದೆ. ರಸ್ತೆಗಾವಲು ನಡೆಸಿ, ವಾಹನಗಳನ್ನು ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಈವರೆಗೆ 108 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 64 ಆರೋಪಿಗಳನ್ನು ಬಂಧಿಸಲಾಗಿದೆ. 4662.695 ಲೀ. ಮದ್ಯ, 95.900 ಲೀ. ಗೋವಾ ಮದ್ಯ, 10.170 ಲೀ. ಮಹಾರಾಷ್ಟ್ರ ಮದ್ಯ, 1207.200 ಲೀಟರ್ ಬಿಯರ್‌, 53 ಲೀಟರ್‌ ಸೇಂದಿ, 170 ಲೀ. ಬೆಲ್ಲದ ಕೊಳೆ, 79.610 ಲೀ. ಸಂತ್ರಾ, 93 ಲೀ. ಕಾಜು, 1714,400 ಲೀ. ಕಳ್ಳಬಟ್ಟಿ, 50 ಕೆ.ಜಿ. ಬೆಲ್ಲ ಹಾಗೂ 7.400 ಲೀ. ವೈನ್ ವಶಪಡಿಸಿಕೊಳ್ಳಲಾಗಿದೆ. 79 ದ್ವಿಚಕ್ರವಾಹನ, 2 ಆಟೊರಿಕ್ಷಾ, 2 ಕಾರು, 4 ಗೂಡ್ಸ್ ವಾಹನ, ಒಂದು ಪಿಕಪ್ ವಾಹನ (ಒಟ್ಟು 88 ವಾಹನಗಳು, ಅಂದಾಜು ಮೌಲ್ಯ ₹ 52 ಲಕ್ಷ ) ವಶಕ್ಕೆ ಪಡೆಯಲಾಗಿದೆ. ಮದ್ಯ, ಬಿಯರ್‌ ಮೊದಲಾದವುಗಳ ಅಂದಾಜು ಮೌಲ್ಯ ₹ 58 ಲಕ್ಷ ಆಗುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT