ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಂದ್ರಯಾನ–2’ಕ್ಕೆ ಬೆಳಗಾವಿಯ ಸೆನ್ಸರ್

Last Updated 24 ಜುಲೈ 2019, 14:16 IST
ಅಕ್ಷರ ಗಾತ್ರ

ಬೆಳಗಾವಿ: ಚಂದ್ರಾನ್ವೇಷಣೆಗೆ ಹೊಸ ಭಾಷ್ಯ ಬರೆದ ‘ಚಂದ್ರಯಾನ–2’ರಲ್ಲಿ ಬಳಸಲಾದ ಸೆನ್ಸರ್‌ಗಳನ್ನು ಇಲ್ಲಿನ ಸರ್ವೋ ಕಂಟ್ರೋಲ್ಸ್‌ ಕಂಪನಿ ಪೂರೈಸಿದೆ.

ಚಂದ್ರಯಾನ, ಮಂಗಳಯಾನ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಉಡಾಯಿಸಲಾದ ರಾಷ್ಟ್ರದ ಪ್ರಮುಖ ಉಪಗ್ರಹಗಳಿಗೆಲ್ಲ ಸೆನ್ಸರ್‌ ಒದಗಿಸಿರುವ ಕಂಪನಿ ಇದಾಗಿದೆ. ಈ ಬಾರಿಯೂ ಎಂಟು ಸೆನ್ಸರ್‌ಗಳನ್ನು ಇಲ್ಲಿಂದ ಪೂರೈಸಲಾಗಿದೆ ಎಂದು ತಿಳಿದುಬಂದಿದೆ.

‘ಚಂದ್ರಯಾನ–1 ಸೇರಿದಂತೆ ಇಸ್ರೊದಿಂದ ಉಡಾಯಿಸಲಾದ ಹಲವು ಉಪಗ್ರಹಗಳಿಗೆ ಸೆನ್ಸರ್‌ ಒದಗಿಸಿದ್ದೇವೆ. ಈಗಲೂ ಕಳುಹಿಸಿದ್ದೇವೆ. ಎಷ್ಟು ಸೆನ್ಸರ್‌ಗಳನ್ನು ಕೊಟ್ಟಿದ್ದೇವೆ, ಅವುಗಳ ಪ್ರಯೋಜನವೇನು, ಪೂರೈಸಿದ ಕಂಪನಿ ಯಾವುದು ಎನ್ನುವುದನ್ನು ಇಸ್ರೊದ ಮಾಧ್ಯಮ ವಿಭಾಗದವರು ಪ್ರಕಟಿಸುತ್ತಾರೆ.

ಇಸ್ರೊದೊಂದಿಗೆ ನಾವು ಮಾಡಿಕೊಂಡಿರುವ ಎನ್‌ಡಿಎ (ನಾನ್‌ ಡಿಸ್ಕ್ಲೋಸರ್‌ ಅಗ್ರಿಮೆಂಟ್) ಒಪ್ಪಂದದ ಪ್ರಕಾರ ನಾವು ಹೆಚ್ಚಿನ ಮಾಹಿತಿ ನೀಡುವುದಕ್ಕೆ ಬರುವುದಿಲ್ಲ’ ಎಂದು ಕಂಪನಿಯ ಮಾಲೀಕ ದೀಪಕ್ ದಡೋತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಇನ್ನಷ್ಟು ಓದಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT