ಬೆಳಗಾವಿ: ವಿದ್ಯಾರ್ಥಿನಿಯರ ಸಂಶೋಧನಾ ವರದಿ ರಾಷ್ಟ್ರಮಟ್ಟಕ್ಕೆ ಆಯ್ಕೆ

7
ನೋಟುಗಳಿಂದ ಸೋಂಕು

ಬೆಳಗಾವಿ: ವಿದ್ಯಾರ್ಥಿನಿಯರ ಸಂಶೋಧನಾ ವರದಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Published:
Updated:

ಬೆಳಗಾವಿ: ಕೈಯಿಂದ ಕೈಗೆ ಬದಲಾಗುವ ನೋಟುಗಳಿಂದ ಹರಡುವ ಸೋಂಕುಗಳ ಬಗ್ಗೆ, ನಗರದ ಕ್ಯಾಂಪ್‌ನಲ್ಲಿರುವ ಕೇಂದ್ರೀಯ ವಿದ್ಯಾಲಯ–2ರ 8ನೇ ತರಗತಿ ವಿದ್ಯಾರ್ಥಿನಿಯರು ಮಂಡಿಸಿದ ಸಂಶೋಧನಾ ವರದಿಯು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.

ವಿದ್ಯಾರ್ಥಿನಿಯರಾದ ಖುಷಿ ಅನಗೋಳಕರ ಹಾಗೂ ಪ್ರಾರ್ಥನಾ ಕುಲಕರ್ಣಿ, ಬೆಂಗಳೂರಿನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್‌ ಪ್ರಾದೇಶಿಕ ಮಟ್ಟದ ಸ್ಪರ್ಧೆಯಲ್ಲಿ ತಮ್ಮ ಸಂಶೋಧನಾ ವರದಿಯನ್ನು ಮಂಡಿಸಿದ್ದರು. ಅದು ಡಿ.3ರಿಂದ 5ರವರೆಗೆ ಕಾನ್ಪುರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ವಿದ್ಯಾರ್ಥಿನಿಯರು ಅಲ್ಲಿಗೆ ತೆರಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !