ಬೆಳಗಾವಿ ಪೊಲೀಸರ ಉಪಗಸ್ತಿಗೆ ‘ರಾಷ್ಟ್ರೀಯ ಯೋಜನೆ’ ಗರಿ

7

ಬೆಳಗಾವಿ ಪೊಲೀಸರ ಉಪಗಸ್ತಿಗೆ ‘ರಾಷ್ಟ್ರೀಯ ಯೋಜನೆ’ ಗರಿ

Published:
Updated:
Prajavani

ಬೆಂಗಳೂರು: ಬೆಳಗಾವಿ ಜಿಲ್ಲಾ ಪೊಲೀಸರು ಜಾರಿಗೆ ತಂದಿರುವ ‘ಉಪಗಸ್ತು’ ವ್ಯವಸ್ಥೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿರುವ ದೆಹಲಿಯ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಶಿಫಾರಸು ಮಾಡಿದೆ. 

‘ಪೊಲೀಸ್ ಸುಧಾರಣೆ’ ವಿಷಯದಡಿ ನವದೆಹಲಿಯಲ್ಲಿ ಫೆ. 7 ಮತ್ತು 8ರಂದು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಉಪಗಸ್ತು’ ವ್ಯವಸ್ಥೆಗೆ ಪೊಲೀಸ್‌ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ವ್ಯವಸ್ಥೆಯನ್ನು ಬೆಳಗಾವಿಯಲ್ಲಿ ಜಾರಿಗೆ ತಂದ ಐಪಿಎಸ್ ಅಧಿಕಾರಿ ಡಾ. ಬಿ.ಆರ್.ರವಿಕಾಂತೇಗೌಡ ಅವರಿಗೆ ಉತ್ತರಾಖಂಡದ ಮಾಜಿ ರಾಜ್ಯಪಾಲ ಕೆ.ಕೆ.ಪಾಲ್ ಅವರು ಪ್ರಶಂಸಾ ಪದಕ ನೀಡಿ ಗೌರವಿಸಿದರು.

2016ರಿಂದ ಬೆಳಗಾವಿ ಜಿಲ್ಲೆಯಲ್ಲಿ ಜಾರಿಗೆ ತರಲಾಗಿರುವ ಉಪಗಸ್ತು ವ್ಯವಸ್ಥೆಯಿಂದಾಗಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲಾ ಎಸ್ಪಿ ನೇತೃತ್ವದ ಈ ವ್ಯವಸ್ಥೆಯು ಗ್ರಾಮೀಣ ಭಾಗದಲ್ಲಿ ಪರಿಣಾಮಕಾರಿಯಾಗಿದೆ. ಸುಮಾರು 50 ಸಾವಿರ ಸಾರ್ವಜನಿಕರು, ಈ ಉಪಗಸ್ತು ಸಮಿತಿಯ ಸದಸ್ಯರಾಗಿದ್ದಾರೆ. ‘ಅಪರಾಧ ಮುಕ್ತ ಸಮಾಜ’ ನಿರ್ಮಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !