ಭಾನುವಾರ, ಡಿಸೆಂಬರ್ 8, 2019
19 °C

ಬಿಜೆಪಿಯ ಐವರು ಶಾಸಕರು ಶೀಘ್ರ ಕಾಂಗ್ರೆಸ್‌ಗೆ: ಬೇಳೂರು ಗೋಪಾಲಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬಿಜೆಪಿಯ ಐವರು ಶಾಸಕರು ಕಾಂಗ್ರೆಸ್ ಸೇರುವುದು ಖಚಿತ. ಈ ಕುರಿತು ಪಕ್ಷದ ಮುಖಂಡರ ಬಳಿ ಮಾತುಕತೆ ನಡೆಸಲಾಗಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾಹಿತಿ ನೀಡಿದರು.

ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳಿಸುವ ತಾಕತ್ತು ಬಿಜೆಪಿಗೆ ಇಲ್ಲ. ಆಪರೇಷನ್ ಕಮಲದ ತಾಕತ್ತು ಬಿಜೆಪಿ ಮುಖಂಡರು ಕಳೆದುಕೊಂಡಿದ್ದಾರೆ. ಈಗ ಏನಿದ್ದರೂ ಆಪರೇಷನ್ ಹಸ್ತ. ಬಿಜೆಪಿಗೆ ತಾಕತ್ತಿದ್ದರೆ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

ಬಿಜೆಪಿ ತೊರೆಯುವ ಐವರಲ್ಲಿ ಹರತಾಳ ಹಾಲಪ್ಪ ಇದ್ದಾರೆಯೇ ಎಂದು ಕಾಲೆಳೆದ ಪತ್ರಕರ್ತರಿಗೆ ತೀಷ್ಣವಾಗಿ ಪ್ರತಿಕ್ರಿಯೆ ನೀಡಿದ ಬೇಳೂರು, ‘ಅವರು ಪಕ್ಷಕ್ಕೆ ಬರುತ್ತೇನೆ ಅಂದರೂ ಸೇರಿಸಿಕೊಳ್ಳಲು ಕಾಂಗ್ರೆಸ್‌ನಲ್ಲಿ ಯಾರೂ ಸಿದ್ಧರಿಲ್ಲ’ ಎಂದರು. 

 ಬಿ.ಎಸ್. ಯಡಿಯೂರಪ್ಪ ಅವರನ್ನು ಇನ್ನು ಮುಂದೆ ಜೈಲಿಗೆ ಹೋಗಿ ಬಂದವರು ಎಂದು ಹೇಳಿದರೆ ಕಾನೂನು ಕ್ರಮಕೈಗೊಳ್ಳುವುದಾಗಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬೆದರಿಕೆ ಹಾಕಿದ್ದಾರಲ್ಲ ಎಂಬ ಪ್ರಶ್ನೆಗೆ ‘ನಾವು ಅವರ ಹೆಸರು ಹೇಳುವುದೇ ಇಲ್ಲ. ಮಾಜಿ ಮುಖ್ಯಮಂತ್ರಿ, ನಮ್ಮ ಜಿಲ್ಲೆಯ ಮುಖ್ಯಮಂತ್ರಿ ಹಿಂದೆ ಜೈಲಿಗೆ ಹೋಗಿ ಬಂದಿದ್ದರು ಎಂದಷ್ಟೇ ಹೇಳುತ್ತೇವೆ’ ಎಂದು ಕುಟುಕಿದರು.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು