ಬೇಂದ್ರೆ ಕವನ ಸ್ಪರ್ಧೆ ಫಲಿತಾಂಶ

7

ಬೇಂದ್ರೆ ಕವನ ಸ್ಪರ್ಧೆ ಫಲಿತಾಂಶ

Published:
Updated:

ಬೆಂಗಳೂರು: ದ.ರಾ.ಬೇಂದ್ರೆ ಕಾವ್ಯಕೂಟದ ವತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ದ.ರಾ.ಬೇಂದ್ರೆ ಕವನ ರಚನಾ ಸ್ಪರ್ಧೆ– 12ರ ಫಲಿತಾಂಶ ಪ್ರಕಟವಾಗಿದೆ. 

ವಿಜೇತರ ವಿವರ: ಅನಿತಾ ‍ಪಿ.ಪೂಜಾರಿ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ಎಂ.ಎ. ದ್ವಿತೀಯ ವರ್ಷದ ವಿದ್ಯಾರ್ಥಿನಿ (ಪ್ರಥಮ, ₹ 3 ಸಾವಿರ ನಗದು ಬಹುಮಾನ), ವಿನಯಾ ಶೆಟ್ಟಿ ಜೆ. ಪ್ರಥಮ ವರ್ಷದ ಎಂ.ಕಾಂ. ವಿದ್ಯಾರ್ಥಿನಿ, ಸರ್ಕಾರಿ ಪ್ರಥಮದರ್ಜೆ  ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ (ದ್ವಿತೀಯ, ₹ 2,500 ಬಹುಮಾನ). ಶರಣಕುಮಾರ ಎಲ್‌.ಎಂ. ದ್ವಿತೀಯ ಎಂ.ಎ., ಕನ್ನಡ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ (ತೃತೀಯ ಬಹುಮಾನ ₹ 2 ಸಾವಿರ)

ವಿಜೇತರಿಗೆ ಜ.31ರಂದು ಸಂಜೆ 4.30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್‌ ಆವರಣದ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕಾವ್ಯಕೂಟದ ಅಧ್ಯಕ್ಷ ಡಾ.ಜಿ.ಕೃಷ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !