ಶನಿವಾರ, ಸೆಪ್ಟೆಂಬರ್ 21, 2019
24 °C

ವಾಕ್‌ ಶ್ರವಣ ಪರೀಕ್ಷೆಗೆ ‌ಇದ್ದವರಿಗೆ ಮೇ 19 ರಂದು ಕೃಷಿ ಪ್ರಾಯೋಗಿಕ ಪರೀಕ್ಷೆ

Published:
Updated:

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಇದೇ 18ರಂದು ನಡೆಸುವ ಕೃಷಿ ಪ್ರಾಯೋಗಿಕ ಪರೀಕ್ಷೆಯ ಹೊರತಾಗಿ ಇತರ ವೃತ್ತಿ ಕೋರ್ಸ್‌ಗಳ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಪ್ರತ್ಯೇಕವಾಗಿ ಇದೇ 19ರ ಭಾನುವಾರ ಪ್ರಾಯೋಗಿಕ  ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪತ್ರದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಎಸ್‌.ರಾಜೇಂದ್ರ ಪ್ರಸಾದ್‌ ಇದೇ 19ರಂದು ಪ್ರಾಯೋಗಿಕ ಪರೀಕ್ಷೆ ನಡೆಸಲು ಅನುಮೋದನೆ ನೀಡಿದ್ದಾರೆ ಎಂದು ಕುಲಸಚಿವ ಡಾ.ಮಹಾಬಲೇಶ್ವರ ಹೆಗಡೆ ತಿಳಿಸಿದ್ದಾರೆ.

ಮೈಸೂರಿನ ವಾಕ್‌ ಮತ್ತು ಶ್ರವಣ ಸಂಸ್ಥೆಯು ಬಿಎಎಸ್ಎಲ್‌ಎಫ್‌ ಕೋರ್ಸ್‌, ಆಯುಷ್‌ ಕೋರ್ಸ್‌ಗಳಿಗೆ ಸೇರಿದಂತೆ ದ್ವಿತೀಯ ಪಿಯುಸಿ ನಂತರದ ವೃತ್ತಿಪರ ಕೋರ್ಸ್‌ಗಳಿಗೆ ಇದೇ 18 ರಂದು ಪರೀಕ್ಷೆ ನಡೆಸಲಿದೆ. ಇಂತಹ ವಿದ್ಯಾರ್ಥಿಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿ.ಕೆ.ವಿ.ಕೆ ಕೇಂದ್ರದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗುವುದು.

ಇದಕ್ಕಾಗಿ ಮೇ 18 ರಂದು ಕೃಷಿ ಪ್ರಾಯೋಗಿಕ ಪರೀಕ್ಷೆ ಹೊರತು ಇತರ ಪರೀಕ್ಷೆಗಳನ್ನು ಬರೆದಿರುವವರು ಕಡ್ಡಾಯವಾಗಿ ದಾಖಲೆ ಅಥವಾ ಪುರಾವೆಗಳನ್ನು ಒದಗಿಸಿದರೆ ಮಾತ್ರ ಅನುಮತಿ ನೀಡಲಾಗುವುದು.

ಮೇ 19ರಂದು ಕೃಷಿ ಪ್ರಾಯೋಗಿಕ ಪರೀಕ್ಷೆ ಹಾಜರಾಗುವ ಅಭ್ಯರ್ಥಿಗಳು ಇದೇ 15 ರೊಳಗೆ ಕೃಷಿ ಸಂಬಂಧಿತ ದಾಖಲಾತಿಗಳನ್ನು ಯಾವುದೇ ಕೇಂದ್ರದಲ್ಲಿ ಪರಿಶೀಲನೆ ಮಾಡಿಸಿಕೊಂಡಿರಬೇಕು. ಕೃಷಿ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಾಗಿರುವುದಕ್ಕೆ ಪ್ರಮಾಣೀಕೃತ ದಾಖಲೆಯನ್ನು ಕಡ್ಡಾಯವಾಗಿ ಹಾಜರುಪಡಿಸಿರಬೇಕು. ಇಲ್ಲವಾದರೆ, ಪ್ರಾಯೋಗಿಕ ಪರೀಕ್ಷೆಗೆ ಅನರ್ಹರಾಗುತ್ತಾರೆ.

ಮೇ 19 ರಂದು ರಾಜ್ಯದ ಇತರೆ ಯಾವುದೇ ಕೃಷಿ ಪ್ರಾಯೋಗಿಕ ಕೇಂದ್ರಗಳಲ್ಲಿ ಕೃಷಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದಿಲ್ಲ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post Comments (+)