ಶುಕ್ರವಾರ, ಡಿಸೆಂಬರ್ 6, 2019
21 °C

ಎಂ.ಜಿ. ರಸ್ತೆ: ತಡವಾಗಿ ಆರಂಭವಾದ ಮೆಟ್ರೊ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಎಂ.ಜಿ. ರಸ್ತೆ ನಿಲ್ದಾಣ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣ ನಡುವೆ ಮೆಟ್ರೊ ರೈಲು ಸಂಚಾರ ಭಾನುವಾರ  ವಿಳಂಬವಾಯಿತು.

ಬೆಳಿಗ್ಗೆ 7ಕ್ಕೆ ಸಂಚಾರ ಆರಂಭವಾಗಬೇಕಿದ್ದ ರೈಲು ಸಂಚಾರ 8.20ಕ್ಕೆ ಪುನರಾರಂಭವಾಯಿತು. ಟ್ರಿನಿಟಿ ವೃತ್ತ ಮತ್ತು ಹಲಸೂರು ನಿಲ್ದಾಣದ ನಡುವೆ ನಿಗಮವು ನಿರ್ವಹಣಾ ಕೆಲಸ ನಡೆಸುತ್ತಿರುವುದರಿಂದ ಮೆಟ್ರೊ ರೈಲು ಸಂಚಾರ ಆರಂಭವಾಗುವುದು ವಿಳಂಬವಾಗಿದೆ. ಟ್ರಿನಿಟಿ ನಿಲ್ದಾಣದ ಬಳಿಯ ಪಿಲ್ಲರ್‌ನ ಬೇರಿಂಗ್ ಬದಲಿಸುವ ಕಾರ್ಯ ನಡೆಸಲಾಗಿದೆ.

ಮೈಸೂರು ರಸ್ತೆ ನಿಲ್ದಾಣದಿಂದ ಎಂ.ಜಿ. ರಸ್ತೆ ನಿಲ್ದಾಣದವರೆಗೆ ಎಂದಿನಂತೆ ಸಮಯಕ್ಕೆ ಸರಿಯಾಗಿ ಸಂಚಾರ ಆರಂಭಿಸಲಾಗಿದೆ ಎಂದು ನಿಗಮ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು