ಒಂದೇ ದಿನ ಎರಡು ಪರೀಕ್ಷೆ: ಅಭ್ಯರ್ಥಿಗಳಲ್ಲಿ ಗೊಂದಲ

7

ಒಂದೇ ದಿನ ಎರಡು ಪರೀಕ್ಷೆ: ಅಭ್ಯರ್ಥಿಗಳಲ್ಲಿ ಗೊಂದಲ

Published:
Updated:

ಬೆಂಗಳೂರು: ರೈಲ್ವೆ ಇಲಾಖೆಯ ‘ಡಿ’ ಗ್ರೂಫ್‌ ನೌಕರರ ನೇಮಕಾತಿ ಪರೀಕ್ಷೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಬಿಇ.ಡಿ. ಕೋರ್ಸ್‌ನ ಪರೀಕ್ಷೆಗಳು ಒಂದೇ ಸಮಯಕ್ಕೆ ಆಯೋಜನೆಗೊಂಡಿವೆ. ಇದರಿಂದ ಕೋರ್ಸ್‌ ಪರೀಕ್ಷೆ ಬರೆಯಬೇಕೇ ಅಥವಾ ಸರ್ಕಾರಿ ನೌಕರಿಗಾಗಿ ಪರೀಕ್ಷೆ ಬರೆಯಬೇಕೇ ಎಂಬ ಗೊಂದಲ ಅಭ್ಯರ್ಥಿಗಳಲ್ಲಿ ಮನೆಮಾಡಿದೆ.

ರೈಲ್ವೆಯು ದೇಶದಾದ್ಯಂತ 62,907 ‘ಡಿ’ ಗ್ರೂಫ್‌ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ಸೆಪ್ಟೆಂಬರ್‌ 17ರಿಂದ ಆನ್‌ಲೈನ್‌ ಆಧಾರಿತ ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ದಿನವೊಂದರಲ್ಲಿ ಮೂರು ಶಿಫ್ಟ್‌ಗಳಲ್ಲಿ ಇಲಾಖೆ ಪರೀಕ್ಷೆ ನಡೆಸಲು ಯೋಜಿಸಿದೆ. ಅಭ್ಯರ್ಥಿಗಳ ಬ್ಯಾಚ್‌ ರೀತಿಯ ಪರೀಕ್ಷೆಯು ಹತ್ತು–ಹನ್ನೇರಡು ದಿನಗಳ ಕಾಲ ನಡೆಯುವ ಸಾಧ್ಯತೆ ಇದೆ. ಸೆಪ್ಟೆಂಬರ್‌ 21 ರಿಂದ 29ರ ವರೆಗೆ ಬಿಇಡಿಯ ಮೊದಲ ಮತ್ತು ಮೂರನೆ ಸೆಮಿಸ್ಟರ್‌ ಪರೀಕ್ಷೆಗಳೂ ನಡೆಯಲಿವೆ.

‘ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಇದರಿಂದ ವಂಚಿತರಾದರೆ ಮುಂದೆ ಇಂತಹ ಅವಕಾಶ ಸಿಗುತ್ತದೆಯೇ ಇಲ್ಲವೋ’ ಎಂದು ಸರ್ಕಾರಿ ಉದ್ಯೋಗದ ಆಕಾಂಕ್ಷಿ, ಶುಶೃತಿ ಬಿಇಡಿ ಕಾಲೇಜಿನ ವಿದ್ಯಾರ್ಥಿ ಜಗದೀಶ್‌ ತಿಳಿಸಿದರು.

‘ರೈಲ್ವೆ ನೇಮಕಾತಿಗಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ತಯಾರಿ ನಡೆಸಿದ್ದೇವೆ. ಈ ಪರೀಕ್ಷೆಗೆ ಹಾಜರಾಗದಿದ್ದರೇ ಓದಿದೆಲ್ಲಾ ವ್ಯರ್ಥವಾಗುತ್ತದೆ. ಬಿಇಡಿ ಪರೀಕ್ಷೆಗಳನ್ನು ರೈಲ್ವೆ ಪರೀಕ್ಷೆಯ ನಂತರ ನಡೆಸಿದರೆ, ಎಲ್ಲ ಅಭ್ಯರ್ಥಿಗಳಿಗೆ ಅನುಕೂಲ ಆಗುತ್ತದೆ’ ಎಂದು ಮತ್ತೊಬ್ಬ ಅಭ್ಯರ್ಥಿ ನಿರಂಜನ್‌ ಹೇಳಿದರು.

‘ಡಿ’ ಗ್ರೂಫ್‌ ನೇಮಕಾತಿಯಲ್ಲಿ ಗೇಟ್‌ಮನ್‌, ಪಾಯಿಂಟ್‌ಮನ್, ಪೋರ್ಟರ್, ಹೆಲ್ಪರ್‌, ಅಟೆಂಡರ್‌, ಸ್ವೀಪರ್‌ನಂತಹ ಹುದ್ದೆಗಳು ಸೇರಿವೆ.

* * * *
 ಪರೀಕ್ಷೆ ಡೇಟ್‌ಗಳು ಕ್ಲ್ಯಾಷ್‌ ಆಗುತ್ತಿರುವುದು ಈವರೆಗೂ ನನ್ನ ಗಮನಕ್ಕೆ ಬಂದಿಲ್ಲ. ಅಭ್ಯರ್ಥಿಗಳೆಲ್ಲ ಸೇರಿ ಪರೀಕ್ಷೆ ಮುಂದೂಡಲು ಅರ್ಜಿ ಸಲ್ಲಿಸಿದರೆ, ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ.

–ಪ್ರೊ.ಸಿ.ಶಿವರಾಮು, ಕುಲಸಚಿವ(ಮೌಲ್ಯಮಾಪನ), ಬೆಂಗಳೂರು ವಿಶ್ವವಿದ್ಯಾಲಯ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !