ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಗೆ ಕೃತಿಗಳ ಆಹ್ವಾನ

7

ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಗೆ ಕೃತಿಗಳ ಆಹ್ವಾನ

Published:
Updated:

ಬೆಂಗಳೂರು: ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು 2018ನೇ ಸಾಲಿನ ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ನೀಡಲು ಕೃತಿಗಳನ್ನು ಆಹ್ವಾನಿಸಿದೆ. 

ಕೃತಿಗಳು ಸ್ವತಂತ್ರ ರಚನೆಯಾಗಿರಬೇಕು. ಅನುವಾದಗಳನ್ನು ಪರಿಗಣಿಸುವುದಿಲ್ಲ. ಪ್ರಶಸ್ತಿಯು ₹ 25,000 ನಗದು ಒಳಗೊಂಡಿದೆ. 

ಆಸಕ್ತ ಲೇಖಕರು, ಪ್ರಕಾಶಕರು 2018ರಲ್ಲಿ ಪ್ರಕಟವಾದ ಕಥಾಸಂಕಲನದ ಮೂರು ಪ್ರತಿಗಳನ್ನು ಮಾರ್ಚ್‌ 31ರೊಳಗೆ ಸಲ್ಲಿಸಲು ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಳಾಸ:  ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ, ನಂ.15, 2ನೇ ಅಡ್ಡರಸ್ತೆ, ನಿಸರ್ಗ ಬಡಾವಣೆ, ಉಲ್ಲಾಳ ಆರ್‌ಟಿಒ ಕಚೇರಿ ಹತ್ತಿರ, ಬೆಂಗಳೂರು – 560091

ಹೆಚ್ಚಿನ ಮಾಹಿತಿಗೆ ಮೊಬೈಲ್‌ ಸಂಖ್ಯೆ 9980305837ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !