ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ | ಕೊಯ್ಲಾಗದ ವೀಳ್ಯದೆಲೆ, ನಷ್ಟದ ಆತಂಕ

ಬೆಳೆಗಾರರಿಗೆ ಮಳೆಯ ಭೀತಿ, ಹಂಬು ಕಿತ್ತು ಬೀಳುವ ಆತಂಕ
Last Updated 30 ಏಪ್ರಿಲ್ 2020, 20:13 IST
ಅಕ್ಷರ ಗಾತ್ರ

ಮೈಸೂರು: ‘ಐದಾರು ವಾರಗಳಿಂದ ವೀಳ್ಯದೆಲೆ ಕೊಯ್ದಿಲ್ಲ. ಈಗ ಮಳೆ–ಗಾಳಿ ಆರಂಭವಾಗಿದೆ. ಎಲೆ ಕೊಯ್ಯದಿದ್ದರೆ ಹಂಬು ಮುರಿದು ಬೀಳಲಿವೆ. ಒಮ್ಮೆ ನೆಲಕ್ಕೆ ಬಿದ್ದರೆ, ನಾವು ಚೇತರಿಸಿಕೊಳ್ಳಲು ಐದಾರು ವರ್ಷಗಳೇ ಬೇಕು...’

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಉದ್ಭೂರು, ಮಾರ್ಬಳ್ಳಿ, ಟಿ.ಕಾಟೂರು, ಗುಮಚನಹಳ್ಳಿ, ಕೆಲ್ಲಹಳ್ಳಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿರುವ ‘ಮೈಸೂರು ವೀಳ್ಯದೆಲೆ’ ಬೆಳೆಗಾರರ ಸಂಕಟವಿದು.

‘ಲಾಕ್‌ಡೌನ್ ಕಾರಣ ಉದ್ಭೂರಿನ ಏಕೈಕ ಮಾರುಕಟ್ಟೆ ಸ್ಥಗಿತವಾಗಿದೆ. ಹೊರಗಿನ ವ್ಯಾಪಾರಿಗಳು ಬರುತ್ತಿಲ್ಲ. ತುರ್ತು ಮಾರುಕಟ್ಟೆ ಸಿಗದಿದ್ದರೆ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ’ ಎಂಬುದು ಬೆಳೆಗಾರರ ಆತಂಕ.

‘ನಾವು ಸಣ್ಣ ಹಿಡುವಳಿದಾರರು. ವೀಳ್ಯದೆಲೆಯೇ ನಮಗೆ ಜೀವನಾಧಾರ. ತಿಂಗಳಿಂದಲೂ ಎಲೆಯನ್ನು ಕೊಯ್ದಿಲ್ಲ. ನಯಾಪೈಸೆಯೂ ಸಿಕ್ಕಿಲ್ಲ. ಕೂಲಿಯನ್ನು ಕೊಡಲಾಗದೇ ಮನೆ ಮಂದಿಯೇ ಎಲೆ ಕೊಯ್ಯಲು ಮುಂದಾದರೂ, ಕೇಳೋರಿಲ್ಲ. ಯಾರ ಮುಂದೆ ಸಂಕಟ ಹೇಳುವುದು?’ ಎಂದು ಬೆಳೆಗಾರರಾದ ರೇವಣ್ಣ, ಚೌಡಯ್ಯ, ಕೆಂಪಚೌಡ, ಹೇಮಾವತಿ, ಕೆಂಪದೇವಮ್ಮ, ಸಿಳ್ಳಪ್ಪ, ಪುರುಷೋತ್ತಮ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

*
ಸಂಕಷ್ಟ ಹೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿ ಬಳಿ ಹೇಳಿಕೊಳ್ಳಲು ಅವಕಾಶವೂ ಸಿಗುತ್ತಿಲ್ಲ
-ಮಹೇಶ್‌, ಎಲೆ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT