ಭಗವದ್ಗೀತೆ ಸ್ಪರ್ಧೆ: ಮುಸ್ಲಿಂ ಬಾಲಕ ಪ್ರಥಮ

7

ಭಗವದ್ಗೀತೆ ಸ್ಪರ್ಧೆ: ಮುಸ್ಲಿಂ ಬಾಲಕ ಪ್ರಥಮ

Published:
Updated:
Deccan Herald

ಬೆಂಗಳೂರು: ಇಸ್ಕಾನ್‌ ಸಂಸ್ಥೆ ಆಯೋಜಿಸಿದ್ದ ‘ಭಗವದ್ಗೀತೆ ಕುರಿತ ರಸಪ್ರಶ್ನೆ ಸ್ಪರ್ಧೆ’ಯಲ್ಲಿ ಸುಭಾಷ್‌ ಮೆಮೋರಿಯಲ್‌ ಇಂಗ್ಲಿಷ್‌ ಶಾಲೆಯ ವಿದ್ಯಾರ್ಥಿ ಶೇಖ್‌ ಮೊಯಿನುದ್ದೀನ್‌ ಪ್ರಥಮ ಸ್ಥಾನ ಗಳಿಸಿದ್ದಾನೆ. 

ಸ್ಪರ್ಧೆಯಲ್ಲಿ 14 ಶಾಲೆಗಳ 400 ಸ್ಪರ್ಧಿಗಳು ಭಾಗವಹಿಸಿದ್ದರು. ಕೇಳಿದ ಎಲ್ಲ 41 ಬಹುಆಯ್ಕೆ ಮಾದರಿಯ ಪ್ರಶ್ನೆಗಳಿಗೆ 9ನೇ ತರಗತಿಯ ಮೊಯಿನುದ್ದೀನ್‌ ಸರಿ ಉತ್ತರ ನೀಡಿದ್ದಾನೆ.

ಈತ ಹೆಬ್ಬಾಳದ ಬಾಲಾಜಿ ಬಡಾವಣೆಯಲ್ಲಿ ನೆಲೆಸಿರುವ ಶೇಖ್‌ ಸಲಾವುದ್ದೀನ್‌ ಮತ್ತು ಸಬಿಯಾ ಮೊಹಮ್ಮದ್‌ ದಂಪತಿಯ ಕಿರಿಯ ಮಗ. ಅಜ್ಜಿ ಅಫ್ಸಿಯಾ ಖಾನಂ ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲು ಮೊಯಿನುದ್ದೀನ್‌ನಿಗೆ ಮಾರ್ಗದರ್ಶನ ಮಾಡಿದ್ದರು.

ಕುರಾನ್‌ನೊಂದಿಗೆ ಭಗವದ್ಗೀತೆ ಮತ್ತು ಬೈಬಲ್‌ಗಳನ್ನು ಓದುವ ಹವ್ಯಾಸವನ್ನು ಈ ಹುಡುಗ ರೂಢಿಸಿಕೊಂಡಿದ್ದಾನೆ. ‘ಈ ಎಲ್ಲ ಗ್ರಂಥಗಳು ಮಾನವೀಯ ಮೌಲ್ಯಗಳನ್ನೆ ತಿಳಿಸುತ್ತವೆ’ ಎಂಬುದು ಮೊಯಿನುದ್ದೀನ್‌ನ ಅಭಿಮತವಾಗಿದೆ.

ಬಹುಮಾನವು ಭಗವದ್ಗೀತೆಯ ಒಂದು ಪ್ರತಿ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !