ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಲಾಕ್‌ಡೌನ್ ಬಂದೋಬಸ್ತ್‌, ಬೈಕ್ ಮೇಲಿಂದ ಬಿದ್ದು ಪಿಎಸ್ಐ ಸಾವು

Last Updated 18 ಏಪ್ರಿಲ್ 2020, 6:03 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದೋಬಸ್ತ್‌ಗಾಗಿ ಶನಿವಾರ ಬೆಳಿಗ್ಗೆ ಬರುತ್ತಿದ್ದ ಖಡೇ ಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಮನೋಹರ ಗಣಾಚಾರಿ (59) ಯಳ್ಳೂರು ರಸ್ತೆಯಲ್ಲಿ ಬೈಕ್‌ನಿಂದ ‌ಬಿದ್ದು ಸಾವಿಗೀಡಾದರು.

ಯಳ್ಳೂರಿನ ಕೆಎಲ್ಇ ಆಸ್ಪತ್ರೆ ಬಳಿ ಬರುತ್ತಿದ್ದಾಗ ಬೈಕ್ ಸ್ಕೀಡ್ ಆಗಿ ಮನೋಹರ ಅವರು ರಸ್ತೆ ಮೇಲೆ ಬಿದ್ದರು. ಅವರ ತಲೆಗೆ ಬಲವಾದ ಏಟು ಬಿದ್ದಿತ್ತು. ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದರು.

ಕಳೆದ ವರ್ಷವಷ್ಟೇ ಅವರು ಪಿಎಸ್ಐ ಆಗಿ ಪದೋನ್ನತಿ ಹೊಂದಿದ್ದರು. ನಿವೃತ್ತಿ ಅಂಚಿಗೆ ಬಂದು ತಲುಪಿದ್ದರು. ಮೃತರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT