ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

96 ತಿದ್ದುಪಡಿ ಕಾಯ್ದೆಗಳು ರದ್ದು: ಮಸೂದೆ ಮಂಡನೆ

Last Updated 20 ಮಾರ್ಚ್ 2020, 23:08 IST
ಅಕ್ಷರ ಗಾತ್ರ

ಬೆಂಗಳೂರು: 2016ರಿಂದ 2019ರ ನಡುವಿನ 96 ತಿದ್ದುಪಡಿ ಕಾಯ್ದೆಗಳು ಹಾಗೂ ಪ್ರಾದೇಶಿಕ ಕಾನೂನುಗಳ ರದ್ದುಪಡಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಕೆಲವು ಅಧಿನಿಯಮಗಳು ಹಾಗೂ ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ಮಸೂದೆ–2020’ನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.

ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಮಸೂದೆ ಮಂಡಿಸಿದರು. 1956ರ ಮೊದಲು ಬಾಂಬೆ, ಕೂರ್ಗ್‌, ಹೈದರಾಬಾದ್‌, ಮದ್ರಾಸ್‌ ಹಾಗೂ ಮೈಸೂರು ರಾಜ್ಯಗಳಲ್ಲಿ ಜಾರಿಯಲ್ಲಿದ್ದ ಪ್ರಾದೇಶಿಕ ಕಾನೂನುಗಳು, ಮಹತ್ವವನ್ನು ಕಳೆದುಕೊಂಡಿರುವ ಬೆಳಗಾವಿ ವಿಭಾಗದ 21, ಕೊಡಗು ಪ್ರದೇಶದ 1, ಕಲಬುರ್ಗಿ ಪ್ರದೇಶದ 16, ಮಂಗಳೂರು ಹಾಗೂ ಕೊಳ್ಳೇಗಾಲದ 15 ಮತ್ತು ಮೈಸೂರು ಪ್ರದೇಶದ 7 ಕಾನೂನುಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT